ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ತನ್ನ ಪ್ರೈವೇಸಿ ಪಾಲಿಸಿ ಬದಲಿಸಿದೆ. ಈ ಸಂಬಂಧ ತನ್ನ ಎಂಡ್ರಾಯ್ಡ್ ಹಾಗೂ ಐ ಫೋನ್ ಬಳಕೆದಾರರಿಗೆ ಬುಧವಾರ ಮಾಹಿತಿ ನೀಡಿದೆ.
ಅಪ್ ಡೇಟ್ ಫೆ.8 ರಿಂದ ಜಾರಿಗೆ ಬರಲಿದೆ. ವಾಟ್ಸಾಪ್ ನಮ್ಮ ಯಾವ ಖಾಸಗಿ ಮಾಹಿತಿಯನ್ನು ಫೇಸ್ ಬುಕ್ ಅಥವಾ ಬೇರೆ ಆ್ಯಪ್ ಗಳ ಜತೆ ಹಂಚಿಕೊಳ್ಳಲಿದೆ ಎಂಬುದನ್ನು ಪ್ರತ್ಯೇಕವಾಗಿ ತಿಳಿಸಲಿದೆ ಎಂದು ಮಾಹಿತಿ ನೀಡಲಾಗಿದೆ.
ಆದರೆ, ವಾಟ್ಸಾಪ್ ಅಪ್ ಡೇಟ್ ಗೆ ಟ್ವಿಟ್ಟರ್ ನಲ್ಲಿ ಮಿಮ್ಸ್ ಗಳನ್ನು ಹರಿಬಿಟ್ಟ ಜನ ಟೀಕೆ ವ್ಯಕ್ತಪಡಿಸಿದ್ದಾರೆ. “ನಾನು ನಿಮ್ಮ ಬಳಿ ಮತ್ತೆ ಬರುವುದಿಲ್ಲ” ಎಂಬ ಸಂದೇಶವಿರುವುದು, ಕಂಪೌಂಡ್ ಇಲ್ಲದ ಮನೆಗೆ ಗೇಟ್ ಬಾಗಿಲು ಹಾಕಿದ ಇನ್ನೊಂದು, ತಲೆ ಮೇಲೆ ಕೈ ಹೊತ್ತು ಕುಳಿತ ಮತ್ತೊಂದು ಮಿಮ್ಸ್ ಗಳನ್ನು ಹರಿಬಿಡಲಾಗಿದೆ.
https://twitter.com/corona_warrior/status/1346665586646945795?ref_src=twsrc%5Etfw%7Ctwcamp%5Etweetembed%7Ctwterm%5E1346665586646945795%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwhatsapp-terms-and-privacy-policy-update-twitter-reacts-with-memes-to-whatsapp-update-2348563