
ಆರ್ಯ ಸಮಾಜದ ಮುಖಂಡ ಅಗ್ನಿವೇಶ್ ಅವರ ಸಾವನ್ನು ಒಳ್ಳೆಯ ಸುದ್ದಿ ಎಂದು ಸಂಭ್ರಮಿಸಿದ್ದ ಸಿಬಿಐ ನಿರ್ದೇಶಕ ಎಂ. ನಾಗೇಶ್ವರ ರಾವ್ ಅವರ ಟ್ವೀಟ್ ಅನ್ನು ಟ್ವೀಟರ್ ಡಿಲಿಟ್‌ಮಾಡಿದೆ.
ದೆಹಲಿಯಲ್ಲಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅಗ್ನಿವೇಶ್ ಅವರ ಸಾವನ್ನು ಸಂಭ್ರಮಿಸಿ ನಾಗೇಶ್ವರ ರಾವ್ ಅವರು ಟ್ವೀಟ್ ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಸಾವನ್ನು ಸಂಭ್ರಮಿಸುವ ಈ ರೀತಿಯ ಟ್ವೀಟ್‌ನ್ನು ಡಿಲಿಟ್ ಮಾಡಬೇಕೆಂಬ ಆಗ್ರಹ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ನಾಗೇಶ್ವರ ರಾವ್ ಅವರ ಟ್ವೀಟ್ ನ್ನು ಡಿಲಿಟ್ ಮಾಡಲಾಗಿದೆ.
ಅಣ್ಣಾ ಹಜಾರೆ ಹೋರಾಟದಲ್ಲಿ ಹಾಗೂ ಕಾರ್ಮಿಕರ ಪರ ಆಗ್ಗಿಂದ್ದಾಗೆ ಧ್ವನಿ ಎತ್ತುತ್ತಿದ್ದ ಅಗ್ನಿವೇಶ್ ಅವರು ಹಿಂದುತ್ವದ ವಿರುದ್ಧ ಮಾತನಾಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ನಾಗೇಶ್ವರ ರಾವ್, ಹಿಂದೂತ್ವಕ್ಕೆ ಭಾರಿ ಪ್ರಮಾಣದಲ್ಲಿ ಹಾನಿಯನ್ನು ಮಾಡಿದ್ದ ಅಗ್ನಿವೇಶ್ ಆಂಧ್ರ ಬ್ರಾಹ್ಮಣರಾಗಿ ಜನಿಸಿದ್ದೇ ದುರಂತ. ಅವರನ್ನು ಕರೆದುಕೊಂಡು ಹೋಗುವಲ್ಲಿ ಯುಮರಾಜ ತುಂಬಾ ತಡಮಾಡಿದ್ದಕ್ಕೆ, ಆತನ ಮೇಲೆ ಬೇಸರವಿದೆ ಎಂದಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.