ನವದೆಹಲಿ: ಪ್ರಧಾನಿ ಮೋದಿಯ ಮೂರು ವೈಫಲ್ಯದ ತೀರ್ಮಾನಗಳು ಅಧ್ಯಯನಕ್ಕೆ ಸೂಕ್ತವಾಗಿವೆ. ಮುಂದೆ ಹಾರ್ವರ್ಡ್ ಬ್ಯುಸಿನೆಸ್ ಸ್ಟಡಿಗೆ ಸೂಕ್ತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕೊರೋನಾ ನಿರ್ವಹಣೆ, ನೋಟು ರದ್ಧತಿ, ಸರಕು ಮತ್ತು ಸೇವಾ ತೆರಿಗೆ ಜಾರಿ ಮೋದಿಯ ವೈಫಲ್ಯದ ತೀರ್ಮಾನವಾಗಿವೆ. ಲಾಕ್ಡೌನ್ ಜಾರಿಯ ಸಂದರ್ಭದಲ್ಲಿ ಕೊರೊನಾ ವಿರುದ್ಧ 21 ದಿನಗಳ ಯುದ್ಧವೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ಈಗ ವಿಶ್ವದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಮೋದಿ ಹೇಳಿಕೆಯೊಂದಿಗೆ ಅಂಕಿ-ಅಂಶ ಸಮೇತ ಟ್ವೀಟ್ ಮಾಡಿದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಟ್ವಿಟರ್ ನಲ್ಲಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರೆಸಿದ್ದಾರೆ.