ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಜಾಹೀರಾತು ಪ್ರದರ್ಶನ ಕುರಿತಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪವಾಡ – ಅಲೌಕಿಕ ಶಕ್ತಿಗಳ ಧಾರ್ಮಿಕ ವಸ್ತುಗಳ ಮಾರಾಟ ಕುರಿತಂತೆ ಪ್ರಸಾರವಾಗುವ ಜಾಹೀರಾತುಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಕೆಲವು ಟಿವಿ ಚಾನೆಲ್ ಗಳಲ್ಲಿ ತಮ್ಮ ಉತ್ಪನ್ನಗಳಲ್ಲಿ ಅಲೌಕಿಕ ಶಕ್ತಿ ಇದೆ. ಇದನ್ನು ಧರಿಸಿದರೆ ಪವಾಡ ಸಂಭವಿಸುತ್ತದೆ ಎಂಬ ಧಾರ್ಮಿಕ ವಸ್ತುಗಳ ಮಾರಾಟ ಕುರಿತ ಜಾಹೀರಾತುಗಳು ಪ್ರಸಾರವಾಗುತ್ತಿರುವುದನ್ನು ಪರಿಗಣಿಸಿ ಬಾಂಬೆ ಹೈಕೋರ್ಟ್ ಈ ಆದೇಶ ಹೊರಡಿಸಿದೆ.
ಅಲ್ಲದೆ ಇಂತಹ ಜಾಹೀರಾತು ಪ್ರಕಟ ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಅವರುಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನ್ಯಾಯಮೂರ್ತಿ ತಾನಾಜಿ ನಲವಾಡೆ ಮತ್ತು ನ್ಯಾಯಮೂರ್ತಿ ಮುಕುಂದ್ ಸೆವಲಿಕರ್ ಅವರುಗಳನ್ನು ಒಳಗೊಂಡಿದ್ದ ಪೀಠ ಸೂಚಿಸಿದೆ.