ನವದೆಹಲಿ: ರೋಗನಿರೋಧಕ ಶಕ್ತಿ ಹೆಚ್ಚಾಗಿರುವ ತುಳಸಿ ಗಿಡಕ್ಕೆ ಭಾರಿ ಬೇಡಿಕೆ ಬಂದಿದೆ. ಒಂದು ಗಿಡ 250 ರೂಪಾಯಿವರೆಗೂ ಮಾರಾಟವಾಗುತ್ತಿದೆ.
ತುಳಸಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಕೊರೋನಾ ಕಾಲದಲ್ಲಿ ಫುಲ್ ಡಿಮ್ಯಾಂಡ್ ಬಂದಿರುವುದರಿಂದ ತುಳಸಿ ಗಿಡ ಕಳವು ಪ್ರಕರಣಗಳೂ ಜಾಸ್ತಿಯಾಗಿವೆ.
ಚಂಡಿಗಡದಲ್ಲಿ ತುಳಸಿಗಿಡ ಕಳವು ಪ್ರಕರಣ ಹೆಚ್ಚಾಗುತ್ತಿವೆ. ಮೊದಲು ತುಳಸಿ ಎಲೆಗಳನ್ನು ಕೇಳಿ ಪಡೆದುಕೊಳ್ಳುತ್ತಿದ್ದ ಜನ ಈಗ ಗಿಡ ಕಣ್ಣಿಗೆ ಕಂಡರೆ ಸಾಕು ಕ್ಷಣ ಮಾತ್ರದಲ್ಲಿ ಕಿತ್ತುಕೊಂಡು ಹೋಗುತ್ತಾರೆ. ಫರೀದಾಬಾದ್, ಚಂಡಿಗಢ, ಕರ್ನಾಲ್, ಗುರುಗ್ರಾಮ ಮೊದಲಾದ ಕಡೆಗಳಲ್ಲಿ ತುಳಸಿ ಕಳವು ಪ್ರಕರಣ ನಡೆಯುತ್ತಿದೆ ಎಂದು ಹೇಳಲಾಗಿದೆ.