ತಿರುಪತಿ: ಕೊರೋನಾ ಕಾರಣದಿಂದ ಆದಾಯದಲ್ಲಿ ಭಾರಿ ಕುಸಿತವಾಗಿರುವುದರಿಂದ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ದೈನಂದಿನ ಖರ್ಚು ವೆಚ್ಚಗಳ ನಿರ್ವಹಣೆಗಾಗಿ ಮಾಸಿಕ ಬಡ್ಡಿ ಪಡೆಯಲು ತೀರ್ಮಾನ ಕೈಗೊಂಡಿದೆ.
ದೇವಾಲಯದ ಠೇವಣಿಗಳಿಂದ ಮಾಸಿಕ ಬಡ್ಡಿ ಪಡೆಯಲು ಟಿಟಿಡಿ ತಿರ್ಮಾನಿಸಿದೆ. ವಿಶ್ವದ ಶ್ರೀಮಂತ ದೇಗುಲವಾಗಿರುವ ಟಿಟಿಡಿ ವಿವಿಧ ಬ್ಯಾಂಕುಗಳಲ್ಲಿ ಸುಮಾರು 12 ಸಾವಿರ ಕೋಟಿ ರೂಪಾಯಿ ಠೇವಣಿ ಇರಿಸಿದೆ.
ಸಿಬ್ಬಂದಿಯ ವೇತನ ಸೇರಿದಂತೆ ಖರ್ಚುವೆಚ್ಚಗಳ ನಿರ್ವಹಣೆಗೆ ಠೇವಣಿಗಳ ಮೇಲೆ ಮಾಸಿಕ ಬಡ್ಡಿ ಪಡೆಯಲು ತೀರ್ಮಾನಿಸಲಾಗಿದ್ದು, ವಾರ್ಷಿಕ 706 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.