ಪಶ್ಚಿಮ ಬಂಗಾಳ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ ಅನ್ನೋವಾಗಲೇ ಮಮತಾ ಬ್ಯಾನರ್ಜಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಲೇ ಇದೆ.
ತೃಣಮೂಲ ಕಾಂಗ್ರೆಸ್ನಿಂದ ಇಬ್ಬರು ಶಾಸಕರು ಹೊರಬಿದ್ದ ಒಂದು ದಿನದಲ್ಲೇ ಪಕ್ಷದ ಮತ್ತೊಬ್ಬ ಶಾಸಕ ರಾಜೀನಾಮೆ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಶಿಲ್ಭದ್ರಾ ದತ್ತಾ ಇಂದು ಬೆಳಗ್ಗೆ ಪಕ್ಷ ತ್ಯಜಿಸಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಗೆ ಕೆಲ ತಿಂಗಳ ಮುಂಚೆ ಪಕ್ಷದಲ್ಲಿ ಈ ರೀತಿಯ ಸಂಚಲನ ಉಂಟಾಗ್ತಿರೋದು ಬಂಗಾಳ ದೀದಿಯನ್ನ ಚಿಂತೆಗೀಡು ಮಾಡಿದೆ.
ನಿನ್ನೆಯಷ್ಟೇ ಸುವೆಂಧು ಅಧಿಕಾರಿ ಹಾಗೂ ಜೀತೇಂದ್ರ ತಿವಾರಿ ತಮ್ಮ ರಾಜೀನಾಮೆ ಪತ್ರವನ್ನ ಪಕ್ಷಕ್ಕೆ ಹಸ್ತಾಂತರಿಸಿದ್ದರು. ಇದೀಗ ಈ ಸಾಲಿಗೆ ಶಿಲ್ ಭದ್ರಾ ದತ್ತಾ ಕೂಡ ಸೇರಿದ್ದಾರೆ. ಇವರೆಲ್ಲರೂ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಗುಮಾನಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.