
ದೇವಸ್ವಂ ಮಂಡಳಿಗೆ ಸೇರಿದ ಕೆಲ ಸದಸ್ಯರು ಆರ್ಎಸ್ಎಸ್ ದೈಹಿಕ ತರಬೇತಿ ಕಾರ್ಯಾಗಾರಕ್ಕೆ ದೇವಸ್ಥಾನದ ಆವರಣವನ್ನ ಬಿಟ್ಟುಕೊಡುತ್ತಿರೋದು ಗಮನಕ್ಕೆ ಬಂದಿದೆ. ಆದರೆ ದೇವಸ್ಥಾನದ ಜಾಗವನ್ನ ರಾಜಕೀಯ ಉದ್ದೇಶಕ್ಕೆ ಬಳಸೋದನ್ನ ಸಹಿಸಲು ಸಾಧ್ಯವಿಲ್ಲ ಎಂದು ಟಿಡಿಪಿ ಅಧ್ಯಕ್ಷ ಎನ್. ವಾಸು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಘಟನೆ
ದೇವಾಲಯದ ಆವರಣದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು ಎಂದು ಈ ಹಿಂದೆಯೇ ನಿರ್ಧಾರ ಮಾಡಲಾಗಿದೆ. ಈ ಆದೇಶದಲ್ಲಿ ಯಾವುದೇ ರಾಜಿ ಇಲ್ಲ. ಈ ವರ್ಷ ಜನವರಿ ತಿಂಗಳಲ್ಲಿ ಸ್ವೀಕರಿಸಿದ ಕೆಲ ದೂರುಗಳನ್ನ ಆಧರಿಸಿ ಈ ಸುತ್ತೋಲೆಯನ್ನ ಹೊರಡಿಸಲಾಗಿದೆ. ಆರ್ಎಸ್ಎಸ್ ಮಾತ್ರವಲ್ಲದೇ ಯಾವುದೇ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ದೇವಾಲಯದ ಆವರಣವನ್ನ ಬಳಸುವಂತಿಲ್ಲ ಎಂದು ವಾಸು ಹೇಳಿದ್ದಾರೆ.