ತೃತೀಯ ಲಿಂಗದ ಸಮುದಾಯದವರನ್ನ ಸಮಾಜದಲ್ಲಿ ಪರಿಗಣಿಸುವ ರೀತಿಯಲ್ಲಿ ದಿನದಿಂದ ದಿನಕ್ಕೆ ಸುಧಾರಣೆಗಳು ಕಂಡು ಬರ್ತಿರುವ ಬೆನ್ನಲ್ಲೇ ತೃತೀಯ ಲಿಂಗಿಗಳು ಕೂಡ ತಾವು ಭಿಕ್ಷೆ ಮಾಡೋದಕ್ಕೆ ಮಾತ್ರ ಸೀಮಿತವಲ್ಲ.ಬದಲಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬಲ್ಲರು ಎಂಬುದನ್ನ ಬಿಹಾರ ಮೂಲದ ತೃತೀಯ ಲಿಂಗಿಯೊಬ್ಬರು ತೋರಿಸಿಕೊಟ್ಟಿದ್ದಾರೆ.
ಬಿಹಾರ ಮೂಲದ ಉದ್ಯಮಿ ಉರೂಜ್ ಹುಸೇನ್ ಉತ್ತರ ಪ್ರದೇಶದ ನೊಯ್ಡಾದಲ್ಲಿ ಕೆಫೆಯನ್ನ ಪ್ರಾರಂಭಿಸಿದ್ದಾರೆ. ತೃತೀಯ ಲಿಂಗದಿಂದಾಗಿ ಸಮಾಜದಲ್ಲಿ ಆಕೆ ಎದುರಿಸಿದ ಸವಾಲುಗಳು ಸ್ವಂತ ಉದ್ಯಮವನ್ನ ಆರಂಭಿಸುವಂತೆ ಮಾಡಿತು. ಕೀಳಾಗಿ ಕಾಣುವ ಜನರ ಎದುರೇ ಎದ್ದು ನಿಲ್ಲಬೇಕೆಂದು ನಿರ್ಧರಿಸಿದ ಉರೂಜ್ ಸ್ಟ್ರೀಟ್ ಟೆಂಪ್ಟೇಷನ್ ಎಂಬ ಹೆಸರಿನಲ್ಲಿ ಕೆಫೆ ಆರಂಭಿಸಿದ್ದಾರೆ.
ತನ್ನ ಪ್ರಯಾಣದಲ್ಲಿನ ಸವಾಲುಗಳ ಬಗ್ಗೆ ವಿವರಿಸುತ್ತಾ, ಉರೂಜ್, ತಾನು ಹುಡುಗನಾಗಿ ಜನಿಸಿದರೂ ಸಹ, ತನ್ನ ಭಾವನೆಗಳು ಹುಡುಗಿಗೆ ಹೇಗೆ ಹೋಲುತ್ತವೆ ಎಂದು ತಿಳಿದಾಗ ಅವಳು ಬೆಳೆಯುವಾಗ ವಿಭಿನ್ನವಾಗಿ ಭಾವಿಸಲು ಪ್ರಾರಂಭಿಸಿದಳು. ಕುಟುಂಬದೊಂದಿಗಿನ ಸಂಘರ್ಷದ ಬಳಿಕ ಉರೂಜ್ 2013ರಲ್ಲಿ ಮನೆ ತ್ಯಜಿಸಿದ್ರು.