alex Certify ಬೆರಗಾಗುವಂತೆ ಮಾಡುತ್ತೆ ಈ ಪಾರ್ಕ್‌ ವಿಶೇಷತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗುವಂತೆ ಮಾಡುತ್ತೆ ಈ ಪಾರ್ಕ್‌ ವಿಶೇಷತೆ…!

Transforming Scrap into Art: Kolkata is Getting India's First 'Tyre Park', One of a Kind Installation

ತ್ಯಾಜ್ಯ ವಸ್ತುಗಳಿಂದ ಕಲಾಕೃತಿಗಳನ್ನ ನಿರ್ಮಾಣ ಮಾಡುವ ಉದ್ದೇಶದಿಂದ ಪಶ್ಚಿಮ ಬಂಗಾಳ ರಾಜ್ಯ ಸಾರಿಗೆ ಇಲಾಖೆ ವಿನೂತನ ಪ್ರಯತ್ನವೊಂದನ್ನ ಮಾಡಿದೆ. ಸಾರಿಗೆ ನಿಗಮದ ಡಿಪೋಗಳಲ್ಲಿದ್ದ ನಿರುಪಯೋಗಿ ಟೈರ್​ಗಳನ್ನ ಬಳಸಿ ಕೊಲ್ಕತ್ತಾದಲ್ಲಿ ಟೈರ್​ ಪಾರ್ಕ್​ ನಿರ್ಮಾಣ ಮಾಡಲಾಗಿದೆ.

ಈ ವಿಚಾರವಾಗಿ ಮಾತನಾಡಿದ ಪಶ್ಚಿಮ ಬಂಗಾಳ ಸಾರಿಗೆ ನಿಗಮದ ಅಧಿಕಾರಿ, ತ್ಯಾಜ್ಯದಿಂದಲೂ ಕಲೆ ಅರಳಿಸಬಹುದು ಎಂಬುದನ್ನ ತೋರಿಸೋಕೆ ಈ ಉದ್ಯಾನವನ್ನ ನಿರ್ಮಿಸಲಾಗಿದೆ. ಕೊಲ್ಕತ್ತಾದ ಈ ಟೈರ್​ ಪಾರ್ಕ್ ಇತರೆ ರಾಜ್ಯಗಳಿಗೂ ಮಾದರಿಯಾಗಲಿದೆ ಅಂತಾ ಹೇಳಿದ್ರು .

ಸಾರಿಗೆ ವಿಭಾಗದ ನೌಕರರು ತಮಗೆ ಸಮಯ ಸಿಕ್ಕಾಗಲೆಲ್ಲ ಟೈರ್​ಗಳನ್ನ ಬಳಸಿ ಕುರ್ಚಿ, ಉಯ್ಯಾಲೆ ಹಾಗೂ ಟೇಬಲ್​ಗಳನ್ನ ನಿರ್ಮಾಣ ಮಾಡುತ್ತಾರೆ. ಈ ಮೂಲಕ ತ್ಯಾಜ್ಯದ ರೂಪದಲ್ಲಿ ಕಸದ ಬುಟ್ಟಿಗೆ ಸೇರಬೇಕಿದ್ದ ಟೈರ್​​ಗಳು ಉತ್ತಮ ರೂಪ ಪಡೆದುಕೊಳ್ತಿವೆ ಅಂತಾ ರಾಜ್ಯ ಸಾರಿಗೆ ನಿಗಮದ ಎಂಡಿ ರಾಜನಾಬೀರ್​ ಸಿಂಗ್​ ಕಪೂರ್​ ಹೇಳಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...