ನವದೆಹಲಿ: ಭಾರತೀಯ ಪುರಾತತ್ವ ಇಲಾಖೆಯಿಂದ ಪ್ರವಾಸಿಗರಿಗೆ ಮಾರ್ಗಸೂಚಿ ರಿಲೀಸ್ ಮಾಡಲಾಗಿದೆ. ಕಂಟೇನ್ಮೆಂಟ್ ಹೊರತುಪಡಿಸಿ ಮ್ಯೂಸಿಯಂ, ಐತಿಹಾಸಿಕ ತಾಣಗಳು ಓಪನ್ ಇರಲಿವೆ.
ಆನ್ ಲೈನ್ ಟಿಕೆಟ್ ಮೂಲಕ ಪ್ರವೇಶ ಟಿಕೆಟ್ ನೀಡಬೇಕು. ಪಾರ್ಕಿಂಗ್, ಹೋಟೆಲ್ ಗಳಲ್ಲಿ ಇ- ಪೇಮೆಂಟ್ ಮಾಡಬೇಕು. ಪ್ರವಾಸಿಗರು, ಸಂದರ್ಶಕರು ಅಂತರ ಕಾಯ್ದುಕೊಳ್ಳಬೇಕು. ಗ್ರೂಪ್ ಫೋಟೋ ತೆಗೆದುಕೊಳ್ಳಲು ಅವಕಾಶ ಇರುವುದಿಲ್ಲ.
ಐತಿಹಾಸಿಕ ತಾಣಗಳ ಬಳಿ ತಿಂಡಿತಿನಿಸು ಮಾರುವಂತಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದೆ.