ಹುಟ್ಟಿದ ಹಬ್ಬಕ್ಕೆ ಕೇಕ್ ಕಟ್ ಮಾಡುವುದು ಸಾಮಾನ್ಯ. ಜಾರ್ಖಂಡ್ ನ ಕೆಲವರು ವಿಶ್ವ ಹಾವಿನ ದಿನಕ್ಕೆ ಕೇಕ್ ಕಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಹಾವುಗಳಿಗೆ ತಿನ್ನಿಸಿದ್ದಾರೆ. ಹಾವುಗಳು ಖಷಿಪಟ್ಟು ಕೇಕ್ ತಿಂದವಾ..? ಈ ಸ್ಟೋರಿ ನೋಡಿ.
ಉರಗ ರಕ್ಷಕರ ತಂಡವೊಂದು ಆಚರಿಸಿದ ಸ್ನೇಕ್ ಡೇ ಕಾರ್ಯಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಕಾರಣವಾಗಿದೆ.
ಜಾರ್ಖಂಡ್ ನ ಸ್ಥಳೀಯ ಚಾನಲ್ ಒಂದು ಕೇಕ್ ಡೇ ಆಚರಿಸಿದ ಸುದ್ದಿ ಬಿತ್ತರಿಸಿದೆ. ಅದರಲ್ಲಿ ಮಹಿಳೆಯೊಬ್ಬರು ಕೇಕ್ ಕಟ್ ಮಾಡುತ್ತಾರೆ. ಪಕ್ಕದಲ್ಲಿ ಹಾವು ಹಿಡಿದು ನಿಂತ ಇನ್ನಿಬ್ಬರು 2 ಹಾವುಗಳಿಗೆ ಕೇಕ್ ತಿನ್ನಿಸಲು ಯತ್ನಿಸುತ್ತಾರೆ.
ಮಹಿಳೆ ಮಾತನಾಡಿ, “ಇಂದು (ಜು.16) ವಿಶ್ವ ಹಾವಿನ ದಿನವಾಗಿದೆ. ನಮಗೆ ಹಾಗೂ ಹಾವುಗಳಿಗೆ ಖುಷಿಯ ದಿನವಾಗಿದೆ. ನಾವು ಉರಗ ರಕ್ಷಕರು ಛೋಟು ಅವರ ಮನೆಯಲ್ಲಿ ಕೇಕ್ ಕಟ್ ಮಾಡಿ ಈ ದಿನವನ್ನು ಆಚರಿಸಿದ್ದೇವೆ. ಇದು ಹಾವುಗಳಿಗೆ ಮಹತ್ವದ ದಿನವಾಗಿದ್ದರಿಂದ ಮೊದಲು ಅವಕ್ಕೇ ಕೇಕ್ ತಿನ್ನಿಸಿದ್ದೇವೆ. ಹಾವುಗಳೂ ನಮಗೆ ಗೌರವ ನೀಡಿ ಕೇಕ್ ತಿಂದಿದ್ದು, ಖುಷಿಗೆ ಕಾರಣವಾಗಿದೆ” ಎಂದಿದ್ದಾರೆ.
ಇನ್ನೊಬ್ಬರು ಮಾತನಾಡಿ, “ಜಾರ್ಖಂಡ್ ನಲ್ಲಿ ಪ್ರಮುಖವಾಗಿ ಐದು ವಿಧದ ಹಾವುಗಳು ಕಾಣಿಸಿಕೊಳ್ಳುತ್ತವೆ” ಎಂದು ವಿವರ ನೀಡಿದ್ದಾರೆ. ಐಎಫ್ಎಸ್ ಅಧಿಕಾರಿ ಡಾ.ಅಬ್ದುಲ್ ಖಯ್ಯಾಂ, ವಿರಾಟ್ ಎ.ಸಿಂಗ್ ಅವರು ಟ್ವಿಟರ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ. ಟ್ವೀಟ್ ಸಖತ್ ವೈರಲ್ ಅಗಿದೆ.12.4 ಸಾವಿರ ಜನ ವೀಕ್ಷಿಸಿದ್ದಾರೆ.
“ಇವರಿಂದ ಹಾವನ್ನು ರಕ್ಷಿಸಬೇಕಿದೆ” ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು, “ಇದು ಸಂಪೂರ್ಣ ಹುಚ್ಚುತನ” ಎಂದಿದ್ದಾರೆ. ಮತ್ತೊಬ್ಬರು, “ಹಾವುಗಳು ಇವರಿಗಿಂತ ಸ್ಮಾರ್ಟ್, ಅವು ಕೇಕ್ ತಿಂದಿಲ್ಲ” ಎಂದು ಕಾಲೆಳೆದಿದ್ದಾರೆ.
https://twitter.com/tweetsvirat/status/1283965203801993216?ref_src=twsrc%5Etfw%7Ctwcamp%5Etweetembed%7Ctwterm%5E1283965203801993216%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Ftotal-madness-rescuers-feed-cake-to-snakes-to-celebrate-world-snake-day-in-jharkhand-video-goes-viral%2F623383