alex Certify ಕೊರೊನಾ ಸೋಂಕಿತರ ಮನೆ ಮುಂದೆ ಪೋಸ್ಟರ್​​ ಅಂಟಿಸುವಂತಿಲ್ಲ: ಸುಪ್ರೀಂ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿತರ ಮನೆ ಮುಂದೆ ಪೋಸ್ಟರ್​​ ಅಂಟಿಸುವಂತಿಲ್ಲ: ಸುಪ್ರೀಂ ಮಹತ್ವದ ಆದೇಶ

ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ನಿರ್ದಿಷ್ಟವಾಗಿ ಆದೇಶಿಸದ ಹೊರತು ಯಾವುದೇ ರಾಜ್ಯವು ಕೊರೊನಾ ರೋಗಿಗಳ ಮನೆಯ ಹೊರಗೆ ಪೋಸ್ಟರ್​ಗಳನ್ನ ಅಂಟಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.

ಕೇಂದ್ರದಿಂದ ಅಂತಹ ಯಾವುದೇ ಮಾರ್ಗಸೂಚಿಗಳನ್ನ ಹೊರಡಿಸಲಾಗಿಲ್ಲ ಹಾಗೂ ಈ ಪದ್ಧತಿಯನ್ನ ಅನುಸರಿಸದಂತೆ ಈಗಾಗಲೇ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಕ್ಕೆ ಪತ್ರ ಹೊರಡಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಅಶೋಕ್​ ಭುಹ್ಸಾ, ಆರ್​.ಸುಭಾಷ್ ರೆಡ್ಡಿ ಹಾಗೂ ಎಂ.ಆರ್​ ಪಾಷಾ ನೇತೃತ್ವದ ತ್ರಿ ಸದಸ್ಯ ಪೀಠ ಆದೇಶ ನೀಡಿದೆ.

ಕೊರೊನಾ ರೋಗಿಗಳ ಮನೆ ಮುಂದೆ ಪೋಸ್ಟರ್​ ಅಂಟಿಸೋದು ಹಾಗೂ ರೋಗಿಗಳ ಹೆಸರನ್ನ ಬಹಿರಂಗ ಪಡಿಸೋದನ್ನ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ಈ ತೀರ್ಪನ್ನ ನೀಡಿದೆ. ಈ ರೀತಿ ಮಾಡೋದು ರೋಗಿಯ ಗೌಪ್ಯತೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರ ಪರ ವಕೀಲ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...