
ವಿಡಿಯೋದಲ್ಲಿ ಪುಟಾಣಿ ಬಾಲಕಿಯೊಬ್ಬಳು 2018ರಲ್ಲಿ ತೆರೆ ಕಂಡ ತಮಿಳು ಸಿನಿಮಾ ಲಕ್ಷ್ಮೀಯ ಮೊರಕ್ಕಾ ಹಾಡನ್ನ ಟಿವಿಯಲ್ಲಿ ಕಂಡು ಅದರಂತೆ ನಟನೆ ಮಾಡುತ್ತಿದ್ದಳು. ಟಿವಿಯಲ್ಲಿ ಯುವ ನಟಿ ದಿತ್ಯಾ ಮಾಡುತ್ತಿದ್ದ ಹೆಜ್ಜೆಯನ್ನ ಈಕೆಯೂ ಅನುಕರಣೆ ಮಾಡುತ್ತಿದ್ದಳು.
ಡ್ಯಾನ್ಸ್ ಮಾಡುತ್ತಿದ್ದ ದಿತ್ಯಾ ಬಸ್ ಕಂಬಕ್ಕೆ ಜಿಗಿದಿದ್ದನ್ನ ನೋಡಿದ ಈ ಪುಟ್ಟ ಪೋರಿ ತಾನು ಕೂಡ ಜಿಗಿದು ಟಿವಿ ಪರದೆಗೆ ಜೋತು ಹಾಕಿಕೊಳ್ಳಲು ಹೋಗಿ ಟಿವಿ ಸಮೇತ ನೆಲಕ್ಕೆ ಬಿದ್ದಿದ್ದಾಳೆ. ಕೂಡಲೇ ಅಲರ್ಟ್ ಆದ ಬಾಲಕಿಯ ಪೋಷಕರು ಆಕೆಯನ್ನ ಬಚಾವ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.