ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯಕ್ಕೆ ಒಂದೇ ದಿನ ಬರೋಬ್ಬರಿ 2.14 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದೆ.
ಕೊರೊನಾ ಲಾಕ್ಡೌನ್ ಕಾರಣದಿಂದ ದೇವಾಲಯವನ್ನು ಬಂದ್ ಮಾಡಲಾಗಿತ್ತು. ಅನ್ಲಾಕ್ ನಂತರದಲ್ಲಿ ದೇವಾಲಯ ತೆರೆದು ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಭಕ್ತರ ಸಂಖ್ಯೆ ನಿಧಾನವಾಗಿ ಹೆಚ್ಚಾಗತೊಡಗಿದೆ.
ಅನ್ಲಾಕ್ ನಂತರ ಅಕ್ಟೋಬರ್ 3 ರಂದು ಒಂದೇ ದಿನ 2.14 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಲಾಕ್ಡೌನ್ ಜಾರಿಯಾಗುವ ಮೊದಲು ಪ್ರತಿದಿನ ತಿರುಪತಿ ತಿಮ್ಮಪ್ಪನ ಹುಂಡಿಗೆ ಸುಮಾರು 3 ಕೋಟಿ ರೂಪಾಯಿಗೂ ಅಧಿಕ ಹಣ ಕಾಣಿಕೆ ಹಣ ಸಂಗ್ರಹವಾಗುತ್ತಿತ್ತು. ಈಗ ಕೊರೊನಾ ಸಂಕಷ್ಟದಲ್ಲೂ ತಿಮ್ಮಪ್ಪನಿಗೆ ದಾಖಲೆಯ ಕಾಣಿಕೆ ಬಂದಿದೆ. ಅನ್ಲಾಕ್ ನಂತರ ಮೊದಲ ಸಲ ಹೆಚ್ಚಿನ ಕಾಣಿಕೆ ಸಂಗ್ರಹವಾಗಿದೆ ಎನ್ನಲಾಗಿದೆ.