
ಕೊರೊನಾ ವೈರಸ್ ಹಬ್ಬುವಿಕೆಯನ್ನು ನಿಯಂತ್ರಣದಲ್ಲಿ ಇಡುವುದು ಕಷ್ಟವಾಗುತ್ತಿರುವ ನಡುವೆ ಜನರಲ್ಲಿ ತಮ್ಮ ಹಾಗೂ ತಮ್ಮ ಕುಟುಂಬಗಳ ಆರೋಗ್ಯದ ಕುರಿತಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಕಳಕಳಿ ಸೃಷ್ಟಿಯಾಗಿದೆ.
ಕೋವಿಡ್-19 ಲಸಿಕೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಜನಸಾಮಾನ್ಯರಿಗೆ ತಿಳಿಸಿ ಹೇಳುವುದು ಬಹಳ ಟ್ರಿಕ್ಕಿ ಕೆಲಸವಾಗಿಬಿಟ್ಟಿದೆ. ಟಿಕ್‌ಟಾಕರ್ ಹಾಗೂ ನಟ ವಿಕ್ ಕೃಷ್ಣ ತಮ್ಮ ಟಿಕ್‌ಟಾಕ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿ ಫೈಜರ್-ಬಯೋಎಂಟೆಕ್ ಹಾಗೂ ಮಾಡೆರ್ನಾ ಸಂಸ್ಥೆಗಳು ತಯಾರಿಸಿದ ಲಸಿಕೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ವಿವರಿಸಿದ್ದಾರೆ.
ಬಂಪರ್….! ಕೇವಲ 1 ರೂ.ಗೆ ಸಿಗ್ತಿದೆ ಈ ಕಂಪನಿ ಉತ್ಪನ್ನ
ಒಳ್ಳೆಯದು ವರ್ಸಸ್ ಕೆಟ್ಟದ್ದರ ನಡುವಿನ ಥ್ರಿಲ್ಲರ್ ಫೈಟ್‌ನಂತೆ ಲಸಿಕೆಯ ಕಾರ್ಯವನ್ನು ವಿವರಿಸಿರುವ ವಿಕ್ ಎಂಆರ್‌ಎನ್‌ಎ ಲಸಿಕೆ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ. ಏಪ್ರಿಲ್ 2ರಂದು ಮಾಡಿದ್ದ ಮತ್ತೊಂದು ವಿಡಿಯೋದಲ್ಲಿ, ಜನರಿಗೆ ಎಂಆರ್‌ಎನ್‌ಎನ ಎರಡು ಡೋಸ್‌ಗಳು ಏಕೆ ಬೇಕೆಂದು ವಿವರಿಸಿದ್ದರು.
https://twitter.com/hotvickkrishna/status/1374481410421968909?ref_src=twsrc%5Etfw%7Ctwcamp%5Etweetembed%7Ctwterm%5E1374481410421968909%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-tiktok-user-and-actor-uses-fork-hands-to-explain-how-covid-19-vaccines-work-in-hilarious-video-3609284.html