ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ ಚೀನಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಪ್ರಯತ್ನಗಳು ಭಾರತದ ಕಡೆಯಿಂದ ನಡೆಯುತ್ತಿದೆ. ಆರ್ಥಿಕವಾಗಿ ಚೀನಾವನ್ನು ಮಣಿಸಲು ಪ್ರಸಿದ್ಧ ಮೊಬೈಲ್ ಆಪ್ ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ.
ಇದೇ ಟಿಕ್ ಟಾಕ್ ನಿಂದ ಪ್ರಸಿದ್ಧರಾಗಿದ್ದ ಜಿ.ಪಿ. ಮುತ್ತು ಆಪ್ ಬ್ಯಾನ್ ಬಗ್ಗೆ ತಮ್ಮ ಬೇಸರ ಹೊರಹಾಕಿದ್ದು, ನಿಷೇಧದಿಂದ ತುಂಬಾ ದುಃಖವಾಯಿತು ಎಂದು ಹೇಳಿಕೊಂಡಿದ್ದಾರೆ.
ಪೆಚ್ಚುಮುತ್ತು ಎಂದು ಹೆಸರಾಗಿದ್ದ ತಮಿಳುನಾಡಿನ ಟುಟಿಕೋರಿಯನ್ ನ ಜಿ.ಪಿ. ಮುತ್ತು ಟಿಕ್ ಟಾಕ್ ಮೂಲಕವೇ ಪ್ರಖ್ಯಾತರಾಗಿದ್ದರು. ಬಡಗಿ ವೃತ್ತಿ ನಡೆಸುತ್ತಿದ್ದ ಅವರು ಪ್ರತಿದಿನ ಹತ್ತರಿಂದ ಹದಿನೈದು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಈ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿದ್ದರು. ಅವರ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸುತ್ತಿದ್ದರು, ಒಂದು ಮಿಲಿಯನ್ ಅನುಯಾಯಿಗಳನ್ನೂ ಹೊಂದಿದ್ದರು. ಅಷ್ಟೇ ಅಲ್ಲದೆ ವಿಶ್ವಾದ್ಯಂತ ಇರುವ ತಮಿಳು ಅಭಿಮಾನಿಗಳನ್ನು ಟಿಕ್ ಟಾಕ್ ಮೂಲಕ ತಲುಪಿದ್ದರು.
ಟಿಕ್ ಟಾಕ್ ಅನ್ನು ನಿಷೇಧಿಸಲಾಗಿದೆ ಎಂದು ತಿಳಿದಾಗ ನಾನು ನಿರಾಸೆಗೊಂಡೆ. ನನ್ನ ವಿಡಿಯೋಗಳನ್ನು ನೋಡಿದ ನಂತರ ಒತ್ತಡದಲ್ಲಿದ್ದ ಅನೇಕರು ನಿರಾಳರಾಗಿದ್ದರು, ಇದನ್ನು ಅಭಿಮಾನಿಗಳೇ ಹೇಳುತ್ತಿದ್ದರು. ವಿವಿಧ ವಯಸ್ಸಿನ ಜನರು ಈ ವೇದಿಕೆಯನ್ನು ಬಳಸಿದ್ದಾರೆ. ನಿಷೇಧಿಸುವುದಾದರೆ ಟಿಕ್ ಟಾಕ್ ಮಾತ್ರವಲ್ಲ ಚೀನಾದ ಎಲ್ಲಾ ಉತ್ಪನ್ನವನ್ನು ನಿಷೇಧಿಸಲಿ ಎಂದು ಅವರು ಹೇಳಿದ್ದಾರೆ. ಈವರೆಗೆ ಸರಿಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ವಿಡಿಯೋಗಳನ್ನು ಅವರು ಪೋಸ್ಟ್ ಮಾಡಿದ್ದರು.