1000ಕ್ಕೂ ಹೆಚ್ಚು ಡೋಸ್ಗಳನ್ನ ಹೊಂದಿದ್ದ ಕೋವಿಶೀಲ್ಡ್ ಲಸಿಕೆಗಳು ಆಸ್ಸಾಂನ ಸಿಲ್ಚಾರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಕೋಲ್ಡ್ ಸ್ಟೋರೇಜ್ ಒಂದರಲ್ಲಿ ಹೆಪ್ಪುಗಟ್ಟಿದ ರೀತಿಯಲ್ಲಿ ಪತ್ತೆಯಾಗಿದೆ. ಸಿಲ್ಚಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದೆ
1000 ಡೋಸ್ಗಳನ್ನ ಹೊಂದಿದ್ದ 100 ಕೋವಿಶೀಲ್ಡ್ ಬಾಟಲಿಗಳು ಹೆಪ್ಪುಗಟ್ಟುವ ಮೂಲಕ ವ್ಯರ್ಥವಾಗಿದೆ ಎಂದು ವರದಿಗಳು ತಿಳಿಸಿದೆ.
ಭಾರತದಲ್ಲಿ ತುರ್ತು ಅನುಮೋದನೆಗೊಂಡಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳೆರಡನ್ನೂ 2-3 ಡಿಗ್ರಿ ಸೆಲ್ಸಿಯಸ್ನಲ್ಲಿ ಕೋಲ್ಡ್ ಸ್ಟೋರೇಜ್ನಲ್ಲಿ ಸಂಗ್ರಹಿಸಿ ಇಡುವಂತೆ ಸೂಚನೆ ನೀಡಲಾಗಿದೆ. ಆದರೆ ಇಲ್ಲಿ ಶೂನ್ಯ ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆ ತಾಪಮಾನದಲ್ಲಿ ಲಸಿಕೆಗಳನ್ನ ಸಂಗ್ರಹಿಸಿ ಇಟ್ಟಿದ್ದೇ ಈ ಅಚಾತುರ್ಯಕ್ಕೆ ಕಾರಣ ಎನ್ನಲಾಗಿದೆ.