
ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡವರಿಗೆ ಮಹತ್ವದ ಸುದ್ದಿಯೊಂದಿದೆ. ಈ ಲಸಿಕೆ ಹಾಕಿಸಿಕೊಂಡವರು ವಿದೇಶ ಪ್ರವಾಸದ ವೇಳೆ ತೊಂದರೆ ಎದುರಿಸುವ ಸಾಧ್ಯತೆಯಿದೆ. ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆ ಪಟ್ಟಿಯಲ್ಲಿ ಅಂದರೆ ಇಯುಎಲ್‌ನಲ್ಲಿ ಕೊವ್ಯಾಕ್ಸಿನ್ ಸೇರ್ಪಡೆಗೊಂಡಿಲ್ಲ.
ಹಾಗಾಗಿ ಇತರ ದೇಶಗಳಿಗೆ ಹೋಗುವ ವೇಳೆ ತೊಂದರೆಯಾಗುವ ಸಾಧ್ಯತೆಯಿದೆ. ಲಸಿಕೆ ಪಡೆಯುವ ಪ್ರಯಾಣಿಕರಿಗೆ ಅನೇಕ ದೇಶಗಳು ತಮ್ಮದೆ ಮಾರ್ಗಸೂಚಿ ಪ್ರಕಟಿಸಿವೆ. ಕೆಲವು ದೇಶಗಳು ಶೀಘ್ರದಲ್ಲೇ ಹೊಸ ನಿಯಮಗಳನ್ನು ಪ್ರಕಟಿಸಲಿವೆ.
ಅನೇಕ ದೇಶಗಳು ತಮ್ಮ ನಿಯಮಕ್ಕೆ ಅನುಗುಣವಾಗಿರುವ ಹಾಗೂ ಡಬ್ಲ್ಯುಎಚ್ಒದಿಂದ ಅನುಮೋದನೆ ಸಿಕ್ಕ ಲಸಿಕೆಗೆ ಒಪ್ಪಿಗೆ ನೀಡಿವೆ. ಪ್ರಸ್ತುತ ಈ ಪಟ್ಟಿಯಲ್ಲಿ ಕೋವಿಶೀಲ್ಡ್, ಮಾಡೆರ್ನಾ, ಫಿಜರ್, ಅಸ್ಟ್ರಾಜೆನೆಕಾ (2), ಜೆನ್ಸನ್ ಮತ್ತು ಸಿನೊಫಾರ್ಮ್ ಬಿಬಿಐಪಿ ಸೇರಿವೆ. ಡಬ್ಲ್ಯುಎಚ್ ಒ ಈವರೆಗೆ ಕೋವ್ಯಾಕ್ಸಿನನ್ನು ಇಯುಎಲ್ ನಲ್ಲಿ ಸೇರಿಸಿಲ್ಲ. ಮೇ-ಜೂನ್ ನಲ್ಲಿ ಸಭೆ ನಡೆಯಲಿದ್ದು, ಈ ವೇಳೆ ಭಾರತ್ ಬಯೋಟೆಕ್ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ದಾಖಲೆ ಅಂಗೀಕರಿಸಿದ ನಂತರ ಕೋವ್ಯಾಕ್ಸಿನ್ ಬಗ್ಗೆ ಡಬ್ಲ್ಯುಎಚ್ ಒ ಮೌಲ್ಯ ಮಾಪನ ಮಾಡಲಿದೆ. ಇದರ ನಂತರ ಲಸಿಕೆಯನ್ನು ಇಯುಎಲ್‌ಗೆ ಸೇರಿಸುವ ಪ್ರಕ್ರಿಯೆ ಪ್ರಾರಂಭಿಸಬಹುದು.