ದೇಶದಲ್ಲಿ ಕೊರೊನಾ 2ನೇ ಅಲೆ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ನಿರ್ಧರಿಸಿದೆ.
ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರವನ್ನ ಕೈಗೊಂಡಿದೆ.
ಇನ್ನು ಈ ಸಂಬಂಧ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ ಜಾವ್ಡೇಕರ್ ದೇಶದಲ್ಲಿ ಅವಶ್ಯಕತೆ ಇರುವಷ್ಟರ ಮಟ್ಟಿಗೆ ಕೊರೊನಾ ಲಸಿಕೆಗಳ ದಾಸ್ತಾನು ಲಭ್ಯವಿದೆ ಎಂದು ಹೇಳಿದ್ದಾರೆ .
ದೇಶದಲ್ಲಿ ಪ್ರಸ್ತುತ 60 ವರ್ಷ ಮೇಲ್ಪಟ್ಟ ಎಲ್ಲಾ ವೃದ್ಧರಿಗೆ ಹಾಗೂ 45 ವರ್ಷ ಮೇಲ್ಪಟ್ಟ ಅಸ್ವಸ್ಥರಿಗೆ ಮಾತ್ರ ಕೊರೊನಾ ಲಸಿಕೆಯನ್ನ ನೀಡಲಾಗುತ್ತಿತ್ತು. ಇದೀಗ ಹೊಸ ನಿಯಮದ ಪ್ರಕಾರ ಕೇಂದ್ರ ಸರ್ಕಾರ ಏಪ್ರಿಲ್ 1ನೇ ತಾರೀಖಿನಿಂದ 45 ವರ್ಷ ಮೇಲ್ಪಟ್ಟ ದೇಶದ ಪ್ರತಿಯೊಬ್ಬ ಜನತೆಗೆ ಕೊರೊನಾ ಲಸಿಕೆಯನ್ನ ಪೂರೈಸಲಿದೆ.