ಕೋವಿಡ್-19 ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲೇ ಇರಬೇಕಾದ ಪರಿಸ್ಥಿತಿಯ ನಡುವೆ ಜನರು ಅಂತರ್ಜಾಲದಲ್ಲಿ ಜಾಲಾಡುತ್ತಾ ಯೂಟ್ಯೂಬ್ ವಿಡಿಯೋಗಳನ್ನು ಹೆಚ್ಚು ನೋಡುತ್ತಿದ್ದಾರೆ.
‘Mostly Sane’ ಹೆಸರಿನ ಯೂಟ್ಯೂಬ್ ಚಾನೆಲ್ ಒಂದರ ಮೂಲಕ ಪ್ರಖ್ಯಾತರಾದ ಪ್ರಜಾಕ್ತಾ ಕೋಲಿ, ಒಂದು ವಿಶಿಷ್ಟ ಕಾನ್ಸೆಪ್ಟ್ ಮೂಲಕ ಹಾಸ್ಯಮಯ ಪ್ರೋಗ್ರಾಂ ಒಂದನ್ನು ಮಾಡಿದ್ದಾರೆ. ಒಂದು ವೇಳೆ ಖಾದ್ಯಗಳೇನಾದರೂ ಮಾತನಾಡುವಂತಿದ್ದರೆ — ಬಟರ್ ಚಿಕನ್, ಬಟರ್ ಪನೀರ್, ಪಾನಿ ಪೂರಿ ಹಾಗು ಸುಶಿಗಳು ಹೇಗೆಲ್ಲಾ ಜಗಳ ಆಡುತ್ತಿದ್ದವು ಎಂಬ ಸಾಧ್ಯತೆಯನ್ನು ತೋರಿದ್ದಾರೆ ಕೋಲಿ.
ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿರುವ ಈ ವಿಡಿಯೋ ಸಖತ್ ವೈರಲ್ ಆಗಿದೆ.