ಸ್ವಾತಂತ್ರ‍್ಯ ದಿನಾಚರಣೆ ವೇಳೆ ಆಗ್ರಾದ ಜಮಾ ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿದ ಬಿಜೆಪಿ ನಾಯಕರೊಬ್ಬರಿಗೆ ಪ್ರಾಣ ಬೆದರಿಕೆಯೊಡ್ಡಲಾಗಿದೆ.
ಉತ್ತರ ಪ್ರದೇಶದ ಅಲ್ಪಸಂಖ್ಯಾತರ ಆಯೋಗದ ಚೇರ್ಮನ್ ಆಗಿರುವ ಆಶ್ಫಾಕ್ ಸೈಫಿಗೆ ಕಾಂಗ್ರೆಸ್ ನಾಯಕ ಹಾಜಿ ಜಮೀಲುದ್ದೀನ್ ಹಾಗೂ ಶಹರ್ ಉಫ್ತಿ ಬೆದರಿಕೆಯೊಡ್ಡಿದ್ದಾರೆ. ಮಸೀದಿಯಂಥ ಪ್ರದೇಶಗಳಲ್ಲಿ ರಾಜಕೀಯ ಮಾಡಿದರೆ ಉತ್ತರ ಪ್ರದೇಶದ ಮುಸ್ಲಿಂ ಸಮುದಾಯ ಸೈಫಿ ವಿರುದ್ಧ ತಿರುಗಿ ಬೀಳಲಿದೆ ಎಂದು ಜಮೀಲುದ್ದೀನ್ ಬೆದರಿಕೆಯೊಡ್ಡಿದ್ದಾರೆ.
ಐವಿಎಫ್ ತಂತ್ರಜ್ಞಾನದಿಂದ ಮಗು ಪಡೆದ ಒಂಟಿ ಮಹಿಳೆ ತಂದೆ ಹೆಸರನ್ನು ಉಲ್ಲೇಖಿಸಬೇಕೆಂದಿಲ್ಲ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು
ಇದಕ್ಕೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಶಿಯಾ ಕೇಂದ್ರ ವಕ್ಫ್ ಮಂಡಳಿಯ ಮುಖ್ಯಸ್ಥ ವಾಸಿಮ್ ರಿಜ್ವಿ, “ನಮ್ಮ ತ್ರಿವರ್ಣವನ್ನು ನಮ್ಮದೇ ನೆಲದಲ್ಲಿ ಹಾರಿಸಲು ಸಾಧ್ಯವಿಲ್ಲ ಎನ್ನುವುದಾದರೆ ಮತಾಂಧರೆಲ್ಲಾ ಜ಼ಾಕೀರ್ ನಾಯಕ್ ನಂತೆ ತಮ್ಮ ಮಸೀದಿಗಳೊಂದಿಗೆ ದೇಶ ಬಿಡಬೇಕು” ಎಂದಿದ್ದಾರೆ.