ಗಣ್ಯಾತಿಗಣ್ಯರಿಗೆ ಸಿಗುವ Z+ ಭದ್ರತೆಯನ್ನು ಮರಿ ಆನೆಯೊಂದಕ್ಕೆ ನೀಡಲಾಗಿದೆ. ಹಾಗೆಂದು ಇದು ಸರ್ಕಾರ ನೀಡಿರುವ ಭದ್ರತೆಯಲ್ಲ. ಬದಲಾಗಿ ತಾಯಿ ತನ್ನ ಮರಿಗೆ ನೀಡಿರುವ ಸುರಕ್ಷತೆ.
ತಾಯಿ ಆನೆಯೊಂದು ತನ್ನ ಮರಿಯನ್ನು ರಕ್ಷಣೆ ಮಾಡಿಕೊಳ್ಳುತ್ತಿರುವ ಮುದ್ದಾದ ವಿಡಿಯೋವೊಂದು ಟಿಕ್ ಟಾಕ್, ಟ್ವಿಟ್ಟರ್ ಗಳಲ್ಲಿ ಹರಿದಾಡುತ್ತಿದೆ.
ಪ್ರವೀಣ್ ಕಸ್ವಾನ್ ಎಂಬ ಅರಣ್ಯಾಧಿಕಾರಿ ಈ ದೃಶ್ಯಾವಳಿಯನ್ನು ಶೇರ್ ಮಾಡಿದ್ದು, 16 ಸೆಕೆಂಡಿನ ವಿಡಿಯೋವನ್ನು 43 ಸಾವಿರಕ್ಕೂ ಅಧಿಕ ಜನರು ಕಣ್ತುಂಬಿಕೊಂಡಿದ್ದಾರೆ.
ಸುಮಾರು 900 ಬಾರಿ ರೀಟ್ವೀಟ್ ಆಗಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಡೆದು ಹೋಗುತ್ತಿರುವ ತಾಯಿ ಆನೆಯ ಮಡಿಲನ್ನು ಅಕ್ಕರೆಯಿಂದ ಹೊಕ್ಕಿದ ಮರಿಯಾನೆ, ತಾಯಿಯ ಎದೆಗೆ ತಾಕಿಕೊಂಡೇ Z+ ಭದ್ರತೆಯಲ್ಲಿ ಮುಂದಡಿ ಇಡುವ ದೃಶ್ಯ ಎಷ್ಟು ಬಾರಿ ನೋಡಿದರೂ ಸಾಲದು.
https://twitter.com/ParveenKaswan/status/1272891106372583427?ref_src=twsrc%5Etfw%7Ctwcamp%5Etweetembed%7Ctwterm%5E1272891106372583427&ref_url=https%3A%2F%2Fwww.indiatoday.in%2Ftrending-news%2Fstory%2Fthis-video-of-a-mother-elephant-protecting-her-baby-calf-will-make-you-smile-watch-1689800-2020-06-17