ನಿಮಗೆ ವನ್ಯಜೀವಿಗಳ ವಿಡಿಯೋ ನೋಡುವ ಅಭ್ಯಾಸವಿದ್ದರೆ ಇಲ್ಲೊಂದು ಕ್ಯೂಟ್ ವಿಡಿಯೋ ಇದೆ ನೋಡಿ.
ಐಎಎಸ್ ಅಧಿಕಾರಿ ಡಾ. ಎಂ.ವಿ. ರಾವ್ ಶೇರ್ ಮಾಡಿರುವ 51 ಸೆಕೆಂಡ್ಗಳ ವಿಡಿಯೋದಲ್ಲಿ ಹೆಣ್ಣು ಚಿರತೆಯೊಂದು ತನ್ನ ಮರಿಗಳೊಂದಿಗೆ ರಸ್ತೆ ದಾಟುತ್ತಿರುವ ದೃಶ್ಯವನ್ನು ನೋಡಬಹುದಾಗಿದೆ. ತಾಯಿ ಚಿರತೆ ರಸ್ತೆ ದಾಟುತ್ತಿದ್ದರೆ ಅದರ ಮರಿಗಳಲ್ಲಿ ಒಂದು ರಸ್ತೆ ಮಧ್ಯೆಯೇ ನಿಂತುಬಿಟ್ಟಿದೆ.
ತನ್ನ ತುಂಟ ಮಗನನ್ನು ರಸ್ತೆ ಮಧ್ಯೆಯಿಂದ ಕರೆದುಕೊಂಡು ಹೋಗಲು ತಾಯಿ ಚಿರತೆ ಮಾಡಿದ ಪ್ರಯತ್ನ ವಿಫಲವಾದ ವೇಳೆ ಜೊತೆಯಲ್ಲಿದ್ದ ಮತ್ತೊಂದು ಮರಿಯೂ ಸಹ ಅಲ್ಲಿಗೇ ಬಂದು ಆಟವಾಡಿಕೊಂಡು ಕುಳಿತುಕೊಳ್ಳುತ್ತದೆ. ಆಗ ತಾಯಿ ಚಿರತೆ ತನ್ನಿಬ್ಬರೂ ಮಕ್ಕಳಿಗೆ ರಕ್ಷಣೆ ಕೊಡುತ್ತಾ ರಸ್ತೆಯಲ್ಲೇ ಕೂರುತ್ತದೆ.
“ಅಸಲೀ ಮಾಲೀಕರಿಗೆ ಹಾದಿಯನ್ನು ಬಿಟ್ಟುಕೊಡೋಣ” ಎಂದು ರಾವ್ ಈ ಪೋಸ್ಟ್ಗೆ ಕ್ಯಾಪ್ಷನ್ ಹಾಕಿದ್ದಾರೆ.