ಪೇದೆಯ ಮೂನ್ ವಾಕ್ ಶೈಲಿ ಹಿಂದಿದೆ ದುರಂತ ಕಥೆ…! 19-01-2021 8:01AM IST / No Comments / Posted In: Latest News, India ಮಧ್ಯ ಪ್ರದೇಶ ಸಂಚಾರಿ ಠಾಣೆ ಇಲಾಖೆಯಲ್ಲಿ ಸುಮಾರು 16 ವರ್ಷಗಳಿಂದ ಟ್ರಾಫಿಕ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ರಂಜಿತ್ ಸಿಂಗ್ ಎಂಬವರು ಮೈಕಲ್ ಜಾಕ್ಸನ್ರ ಮೂನ್ ವಾಕ್ ಶೈಲಿಯನ್ನ ಬಳಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡ್ತಿದ್ದಾರೆ. ವಿಶಿಷ್ಟ ಶೈಲಿಯಲ್ಲಿ ಸೇವೆ ಸಲ್ಲಿಸುವ ರಂಜಿತ್ ಇದೀಗ ಸೋಶಿಯಲ್ ಮೀಡಿಯಾ ಐಕಾನ್ ಆಗಿದ್ದು ಅನೇಕ ಮಂದಿ ಇವರ ಬಳಿ ಸೆಲ್ಫಿ ಕೇಳುತ್ತಾರಂತೆ. ಅಂದಹಾಗೆ ರಂಜಿತ್ ಸಿಂಗ್ರ ಈ ಮೂನ್ವಾಕ್ ಶೈಲಿಯ ಹಿಂದೆ ದುರಂತ ಕತೆಯೊಂದಿದೆ. ಸುಮಾರು 16 ವರ್ಷಗಳ ಹಿಂದೆ ನಾನು ಕೆಲಸವನ್ನ ಆರಂಭಿಸಿದ ವೇಳೆ ರಸ್ತೆ ಅಪಘಾತ ನಡೆದ ಸ್ಥಳವನ್ನ ನಿಯಂತ್ರಿಸುವಂತೆ ನನಗೆ ಉನ್ನತ ಅಧಿಕಾರಿಗಳಿಂದ ಕರೆ ಬಂದಿತ್ತು. ನಾನು ಸ್ಥಳಕ್ಕೆ ಹೋಗಿ ನೋಡಿದ್ರೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವ ನನ್ನ ಸ್ನೇಹಿತನೇ ಆಗಿದ್ದ. ನಾನು ಚಿಂತೆಯಲ್ಲಿ ಹೆಜ್ಜೆ ಹಾಕುತ್ತಾ ಟ್ರಾಫಿಕ್ ನಿಯಂತ್ರಣ ಮಾಡುತ್ತಿದ್ದೆ. ಇದನ್ನ ನೋಡಿದ ಹಿರಿಯ ಅಧಿಕಾರಿಗಳು, ನಿನ್ನ ಚಲನೆಯನ್ನ ನೋಡಿ ಜನರು ನಿನ್ನ ಮಾತನ್ನ ಕೇಳ್ತಿದ್ದಾರೆ ಅಂತಾ ಹೇಳಿದ್ರು. ಅಂದಿನಿಂದ ನಾನು ಮೂನ್ವಾಕ್ ಶೈಲಿಯನ್ನ ರೂಢಿಸಿಕೊಂಡೆ ಅಂತಾ ಹೇಳಿದ್ರು ರಂಜಿತ್. ಕಾಲೇಜು ದಿನಗಳಲ್ಲೇ ಡ್ಯಾನ್ಸರ್ ಆಗಿದ್ದ ರಂಜಿತ್ ಸಿಂಗ್ ಆರ್ಥಿಕ ಕಾರಣಗಳಿಂದಾಗಿ ತಮ್ಮ ಕನಸನ್ನ ಪೂರ್ತಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ರೀಗ ತಮ್ಮ ಡ್ಯಾನ್ಸಿಂಗ್ ಶೈಲಿ ಮೂಲಕವೇ ನನ್ನ ಕರ್ತವ್ಯವನ್ನ ನಿಭಾಯಿಸ್ತಾ ಇರೋದಕ್ಕೆ ಖುಷಿ ಇದೆ ಎಂದು ಹೇಳಿದ್ರು. Indore's traffic constable Ranjeet Singh has been using 'moonwalk' to control the traffic for nearly 16 years, he got famous on social media because of his unique style of performing his duty however, a tragic story behind his mirth at work @ndtv @ndtvindia @vinodkapri pic.twitter.com/t72p6wtavZ — Anurag Dwary (@Anurag_Dwary) January 18, 2021