alex Certify ಈ ಟೀಚರ್‌ ಮಾಡಿದ ಕ್ರಿಯೇಟಿವ್‌ ಐಡಿಯಾಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಟೀಚರ್‌ ಮಾಡಿದ ಕ್ರಿಯೇಟಿವ್‌ ಐಡಿಯಾಗೆ ನೆಟ್ಟಿಗರು ಫಿದಾ

ಕೊರೋನಾ ವೈರಸ್‌ ಸಾಂಕ್ರಮಿಕದ ಕಾರಣದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಸದ್ಯಕ್ಕೆ ಇರುವ ಸಾಧ್ಯತೆಗಳಲ್ಲಿ ಆನ್ಲೈನ್‌ ಟೀಚಿಂಗ್ ಬಹಳ ಮಹತ್ವ ಪಡೆದುಕೊಂಡಿದೆ.

ಆದರೆ ಮಕ್ಕಳಿಗೆ ಆನ್ಲೈನ್ ಮೂಲಕ ಪಾಠ ಮಾಡುವುದು ಅಷ್ಟು ಸುಲಭವಲ್ಲ. ಶಿಕ್ಷಕಿಯೊಬ್ಬರು ತಮ್ಮ ಮಕ್ಕಳಿಗೆ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪಾಠ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

ತರಗತಿಯಲ್ಲಿ ಖುದ್ದು ಬೋರ್ಡ್ ಮೇಲೆ ಬರೆದುಕೊಂಡು ಪಾಠ ಮಾಡುವ ಅನುಭವಗಳನ್ನು ನೀಡುವ ಇರಾದೆಯೊಂದಿಗೆ ಈ ರಚನಾತ್ಮಕ ಐಡಿಯಾ ಉಪಯೋಗಿಸಿದ್ದಾರೆ ಈ ಶಿಕ್ಷಕಿ. ಹಾಳೆಗಳ ಮೇಲೆ ಖುದ್ದು ತಾವೇ ಲೆಕ್ಕಗಳನ್ನು ಬಿಡಿಸಿಕೊಂಡು, ಅದನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾ, ಅದರ ಪ್ರೆಸೆಂಟೇಷನ್‌ ಅನ್ನು ಲೈವ್ ಕಾಲ್ ಮೂಲಕ ತನ್ನ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದಾರೆ ಈ ಶಿಕ್ಷಕಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...