ಕೋವಿಡ್ ಎರಡನೇ ಅಲೆಯ ವಿರುದ್ಧ ಹೋರಾಟದಲ್ಲಿ ಇಡೀ ದೇಶವೇ ದಣಿಯುತ್ತಿದ್ದರೆ ಒಡಿಶಾದ ಗಂಜಾಂ ಜಿಲ್ಲೆಯ ಈ ಊರು ಸಾಂಕ್ರಮಿಕ ನಿಯಂತ್ರಣದ ವಿಚಾರದಲ್ಲಿ ಮಾದರಿಯಾಗಿದೆ.
ಇಲ್ಲಿನ ಖಾಲಿಕೋಟೆ ಬ್ಲಾಕ್‌ನ ದಾನಾಪುರ ಪಂಚಾಯತ್‌ನ ಕರಂಜಾರಾ ಗ್ರಾಮದಲ್ಲಿ 261 ಮನೆಗಳಿದ್ದು, 1,234 ಜನರು ವಾಸವಿದ್ದಾರೆ. ಕಳೆದ ವರ್ಷ ಸಾಂಕ್ರಮಿಕ ಆರಂಭಗೊಂಡಾಗಿನಿಂದ ಇಲ್ಲಿವರೆಗೂ ಈ ಊರಿನಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.
ವಿದ್ಯಾರ್ಥಿಗಳಿಗೆ ಹೊಸ ಮಾದರಿ ಪರೀಕ್ಷೆ: ಜೂನ್ 1 ರಿಂದ 12 ನೇ ತರಗತಿ ‘ಎಕ್ಸಾಂ ಫ್ರಂ ಹೋಂ’ ನಡೆಸಲು ಛತ್ತಿಸ್ ಗಢ ಸರ್ಕಾರ ನಿರ್ಧಾರ
ಊರಿನ ಯಾರೊಬ್ಬರೂ ಸಹ ತಮಗೆ ರೋಗದ ಲಕ್ಷಣಗಳಿವೆ ಎಂದು ಇದುವರೆಗೂ ಹೇಳಿಲ್ಲ. ಜನವರಿಯಲ್ಲಿ ಊರಿನ 32 ಮಂದಿಗೆ ರ‍್ಯಾಂಡಮ್ ಆಗಿ ನಡೆಸಲಾದ ಕೋವಿಡ್ ಪತ್ತೆ ಪರೀಕ್ಷೆಯಲ್ಲಿ ಎಲ್ಲರೂ ನೆಗೆಟಿವ್ ಎಂದು ಕಂಡುಬಂದಿದ್ದಾರೆ.
ಇದೇ ವೇಳೆ, ರಾಜ್ಯ ಸರ್ಕಾರದ ನೀತಿಯಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಬಾಗಿಲಿಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದು, ವೃದ್ಧರು ಸೇರಿದಂತೆ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವ ಪ್ರತಿಯೊಬ್ಬರನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ.
WHO ಅನುಮೋದನೆ ಇಲ್ಲದಿದ್ರೂ ಕೊವ್ಯಾಕ್ಸಿನ್ ಬಳಕೆ: 2 ಕೋಟಿ ಮಂದಿಗೆ ವ್ಯಾಕ್ಸಿನ್ ಕೊಟ್ಟ ನಂತರ ಅಪ್ರೂವಲ್ ಗೆ ದುಂಬಾಲು
“ಊರಿನ ಪ್ರತಿಯೊಬ್ಬರೂ ಸಹ ಕೋವಿಡ್-19ಗೆ ಸಂಬಂಧಪಟ್ಟ ಸುರಕ್ಷತಾ ಮಾನದಂಡಗಳ ಬಗ್ಗೆ ಜಾಗೃತರಾಗಿದ್ದಾರೆ. ಮಹಿಳೆಯರು ಮಕ್ಕಳು ಸೇರಿದಂತೆ ಪ್ರತಿಯೊಬ್ಬ ಗ್ರಾಮಸ್ಥರೂ ಸಹ ತಂತಮ್ಮ ಮನೆಗಳಿಂದ ಹೊರ ಬಂದ ಕೂಡಲೇ ಮಾಸ್ಕ್ ಧರಿಸುವುದಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಖಾತ್ರಿ ಪಡಿಸುತ್ತಾರೆ” ಎಂದು ಗ್ರಾಮಕ್ಕೆ ಭೇಟಿ ಕೊಟ್ಟ ವೇಳೆ ಗಂಜಾಂ ಜಿಲ್ಲೆಯ ಕಲೆಕ್ಟರ್ ವಿಜಯ್ ಕುಳಾಂಜೆ ತಿಳಿಸಿದ್ದಾರೆ.
ಊರಿನ ಕೆಲ ಯುವಕರು ಮುಂಬೈಯಲ್ಲಿ ಕೆಲಸ ಮಾಡಿಕೊಂಡು ಇದ್ದರೂ ಸಹ ಅವರೆಲ್ಲಾ ಕಳೆದ ವರ್ಷ ತಂತಮ್ಮ ಮನೆಗಳಿಗೆ ಮರಳಿದ ಸಂದರ್ಭದಲ್ಲಿ ಕಡ್ಡಾಯವಾಗಿ ಸ್ವಯಂಪ್ರೇರಣೆಯಿಂದ ಕ್ವಾರಂಟೈನ್ ಆಗಿದ್ದರು.