ಕಾಶ್ಮೀರ: ಅನಂತನಾಗ್ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿನಿ ತಬೀಶ್ ಅಜೀಜ್ ಖಾನ್ ತಮ್ಮ ಪ್ರವೃತ್ತಿಯ ಮೂಲಕ ಹೆಚ್ಚು ಪ್ರಸಿದ್ಧರಾಗಿದ್ದಾರೆ. ತ್ಯಾಜ್ಯ ವಸ್ತುಗಳ ಮೇಲೆ ಚಿತ್ರ ಬಿಡಿಸಿ ಅವರು ಒಂದು ಸುಂದರ ಕಲಾಕೃತಿಯಾಗಿ ಅರಳಿಸಿ ಜನರಲ್ಲಿ ಅಚ್ಚರಿ ಮೂಡಿಸುತ್ತಾರೆ.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಇಲ್ಬಾಲ್ ಅಬಾದ್ ನವರಾಗಿದ್ದಾರೆ. 4 ನೇ ತರಗತಿಯಲ್ಲಿದ್ದಾಗ ಅವರು ಮೊದಲ ಚಿತ್ರ ಬಿಡಿಸಿದರು. ಈಗ ತಮ್ಮಕೌಶಲ್ಯವನ್ನು ವೃದ್ಧಿಸಿಕೊಂಡಿದ್ದಾರೆ.
“ನಾನು 2016. ರಲ್ಲಿ ಪೇಂಟಿಂಗ್ ಪ್ರಾರಂಭಿಸಿದೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದೆ. ನನಗೆ ಅದ್ಭುತ ಪ್ರತಿಕ್ರಿಯೆ ದೊರಕಿತು. ಅದರಿಂದ ಸ್ಪೂರ್ತಿಯಾಗಿ ನಾನು ಹೆಚ್ಚು ಹೆಚ್ಚು ಬಿಡಿಸತೊಡಗಿದೆ. ಪೇಟಿಂಗ್ ಈಗ ನನ್ನ ಹವ್ಯಾಸವಾಗಿ ಮಾತ್ರ ಉಳಿದಿಲ್ಲ. ಒಂದು ಫ್ಯಾಷನ್ ಆಗಿದೆ” ಎಂಬುದು ತಬೀಶ್ ಅಭಿಪ್ರಾಯ.
ಮೆಡಿಕಲ್ ಕಾಲೇಜ್ ನ ಹಿಂದೆ 2016 ರಲ್ಲಿ ರಚಿಸಿದ ಚಿತ್ರಗಳು ಇನ್ನೂ ಇವೆ. ಕ್ಯಾನ್ವಾಸ್ ಪೇಪರ್ ಮೇಲಲ್ಲದೆ, ಒಡೆದ ಗಾಜು, ಚಿನರ್ ಎಲೆ, ಕಟ್ಟಿಗೆ ತುಂಡು ಹೀಗೆ ಎಲ್ಲದರ ಮೇಲೆ ಅವರು ಚಿತ್ರ ಬಿಡಿಸುತ್ತಾರೆ. ಬೇಡ ಎಂದು ಎಸೆದ ವಸ್ತುಗಳು ಅವರ ಕೈಗೆ ಬಂದರೆ, ಸುಂದರ ಚಿತ್ರವಾಗಿ ಅಮೂಲ್ಯ ಬೆಲೆ ಪಡೆದುಕೊಳ್ಳುತ್ತದೆ. “ನಮ್ಮ ಪಾಲಕರು ನನ್ನ ಎಂಬಿಬಿಎಸ್ ಓದಿಗೆ ಹಾಗೂ ಚಿತ್ರಕಲೆಗೂ ಬೆಂಬಲ ನೀಡುತ್ತ ಬಂದಿದ್ದಾರೆ” ಎಂದು ತಬೀಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.