ಒಂದೇ ಒಂದು ಬಲ್ಬ್ ಹೊಂದಿದ್ದ ಮನೆಗೆ ಬಂತು ಬರೋಬ್ಬರಿ 12,500 ರೂಪಾಯಿ ಕರೆಂಟ್ ಬಿಲ್….! 31-03-2021 6:26AM IST / No Comments / Posted In: Latest News, India ಬಿಪಿಎಲ್ ಕಾರ್ಡ್ನ್ನ ಹೊಂದಿದ್ದ ಜನರು 12 ಸಾವಿರ ರೂಪಾಯಿಗಿಂತಲೂ ಹೆಚ್ಚಿನ ಮೊತ್ತದ ಕರೆಂಟ್ ಬಿಲ್ ಪಡೆದ ಆಘಾತಕಾರಿ ಘಟನೆ ಓಡಿಶಾದ ಕಾಲಹಂಡಿಯಲ್ಲಿ ನಡೆದಿದೆ. ಆಕ್ರೋಶಗೊಂಡ ಬಡಜನತೆ ರಾಜ್ಯ ಇಂಧನ ಸಚಿವ ದಿಬ್ಯಾ ಶಂಕರ್ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಸ್ಥಳೀಯ ನಿವಾಸಿ ಕರುಣಾಕರ್ ಸಾಗರ್, ನಮ್ಮ ಮನೆಯಲ್ಲಿ ಇರೋದೇ ಒಂದು ಬಲ್ಬ್ ಆದರೆ ನಮಗೆ 12,500 ರೂಪಾಯಿ ಕರೆಂಟ್ ಬಿಲ್ ಬಂದಿದೆ. ಒಂದು ಬಲ್ಬ್ ಉರಿಸಿದ್ದಕ್ಕೆ ಇಷ್ಟೊಂದು ಬಿಲ್ ಬರೋಕೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಮನೆಯಲ್ಲಿ ಒಂದೇ ಒಂದು ಬಲ್ಬ್ನ್ನು ನಿತ್ಯ ಉರಿಸುತ್ತೇನೆ. ಇದಕ್ಕೆ ಎಷ್ಟು ಬಿಲ್ ಬರಬಹುದು. ಆದರೆ ನನಗೆ 12,500 ರೂಪಾಯಿ ಎಲೆಕ್ಟ್ರಿಸಿಟಿ ಬಿಲ್ ಬಂದಿದೆ. ಒಂದು ಸಿಂಗಲ್ ಬಲ್ಬ್ಗೆ ಇಷ್ಟೊಂದು ಹಣ ಪಾವತಿ ಮಾಡಬೇಕೇ..? ಕೊರೊನಾ ಸಂಕಷ್ಟದ ಸಂದರ್ಭದಲ್ಲೂ 500 ರೂಪಾಯಿವರೆಗೂ ಬಿಲ್ ವಸೂಲಿ ಮಾಡಿದ್ದಾರೆ. ಇದಾಗಿ ಐದಾರು ತಿಂಗಳ ಬಳಿಕ 12,500 ಬಿಲ್ ನೀಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ರು. Odisha: After receiving electricity bills of over Rs 12,000, people under BPL (Below Poverty Line) category in Kalahandi burn an effigy of Odisha Energy Minister "I use one bulb & I received a bill of Rs 12,500. How much does it cost to use a single bulb?" asked a local (29.03) pic.twitter.com/paLfcbMzD1 — ANI (@ANI) March 29, 2021