ಜೇನುಹುಳಗಳು ಕಚ್ಚುವುದು ಬಿಡಿ, ದೂರದಲ್ಲಿ ಓಡಾಡುತ್ತಿದ್ದರೂ ಅದರ ಶಬ್ದ ಕೇಳಿದರೇ ಅನೇಕರಿಗೆ ಕೂದಲು ನೆಟ್ಟಗಾಗುತ್ತವೆ. ಇನ್ನು ಸುಮಾರು 60 ಸಾವಿರ ಜೇನುಹುಳಗಳನ್ನು ಮೈಮೇಲೆ ಕೂರಿಸಿಕೊಂಡರೆ!
ಹೌದು, ನಾವು ಊಹಿಸಿಕೊಳ್ಳಲು ಸಾಧ್ಯವಾಗದ ಈ ಕೆಲಸವನ್ನು ಕೇರಳದ ಯುವಕನೊಬ್ಬ ಮಾಡಿದ್ದಾನೆ. ಸುಮಾರು 60 ಸಾವಿರ ಜೇನುನೊಣವನ್ನು ಸುಮಾರು ನಾಲ್ಕು ತಾಸು ಮುಖದ ಮೇಲೆ ಕೂರಿಸಿ ಕೊಂಡಿದ್ದಾನೆ. ಈ ಮೂಲಕ ಹಿಂದಿದ್ದ ದಾಖಲೆಯನ್ನು ಸರಿಗಟ್ಟಿದ್ದಾನೆ.
ಕೇರಳ ಮೂಲದ ಈ ವ್ಯಕ್ತಿಯನ್ನು ನೇಚರ್ ಎಂದು ಹೇಳಲಾಗಿದ್ದು, ಆತನಿಗೆ ಅವರ ತಂದೆಯಿಂದ ಜೇನಿನ ನಂಟು ಶುರುವಾಗಿದೆ. ಆರಂಭದಲ್ಲಿ ಒಂದು ನೊಣದಿಂದ ಶುರುವಾದ ಮೈಮೇಲೆ ಬಿಟ್ಟುಕೊಳ್ಳುವ ಕ್ರೇಜ್ ಇದೀಗ ಈ ಹಂತಕ್ಕೆ ಬಂದು ತಲುಪಿದೆ.
ಅಪ್ಪ ಮತ್ತು ಮಗ ಇಬ್ಬರು ಜೇನು ಕೃಷಿ ಮಾಡಿದ್ದು, ಇದರಲ್ಲಿ ಉನ್ನತ್ತ ಶಿಕ್ಷಣ ಪಡೆದಿದ್ದಾರೆ. ಇದೀಗ ಜನರಲ್ಲಿ ಜೇನುನೊಣವನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
https://www.facebook.com/GuinnessWorldRecords/videos/10156320896204032