![](https://kannadadunia.com/wp-content/uploads/2020/12/BB1ch4nw.jpg)
ತೀವ್ರ ರಕ್ತದೊತ್ತಡದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಡಿಸೆಂಬರ್ 27 ರಂದು ಮನೆಗೆ ಮರಳಿದ್ದು, ಈ ವೇಳೆ ಅವರ ಪತ್ನಿ ಲತಾ ರಜನಿಕಾಂತ್ ಆರತಿ ಬೆಳಗಿ ಬರಮಾಡಿಕೊಂಡರು.
ಹೈದರಾಬಾದ್ ನ ಬೇಗಮ್ ಪೇಟೆಯ ವಿಮಾನ ನಿಲ್ದಾಣದಿಂದ ಚಾರ್ಟರ್ಡ್ ವಿಮಾನದ ಮೂಲಕ ಚನ್ನೈಗೆ ಬಂದಿದ್ದ ರಜನಿಕಾಂತ್ ಜೊತೆ ಮಗಳು ಐಶ್ವರ್ಯ, ಅಳಿಯ ಧನುಷ್ ಇದ್ದರು.
ಚೆನ್ನೈನ ತಮ್ಮ ಪೋಯಸ್ ಗಾರ್ಡನ್ ಮನೆಗೆ ಮರಳುತ್ತಿದ್ದಂತೆ ರಜನಿಕಾಂತ್, ಅಲ್ಲಿದ್ದವರಿಗೆಲ್ಲ ಕೈಮುಗಿದು ಧನ್ಯವಾದ ಅರ್ಪಿಸಿದರು. ಅವರ ಪತ್ನಿ ಆರತಿಯೊಂದಿಗೆ ಕಾಯುತ್ತಿದ್ದರು. ಈ ಸಂದರ್ಭಗಳ ಫೋಟೋಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.
![This is how wife Latha welcomed Rajinikanth home after health scare - Movies News](https://akm-img-a-in.tosshub.com/indiatoday/images/bodyeditor/202012/Rajini-x826.jpg?3Ar0j5aRBVOhAIvWW4qz_ei8.O18XNuy)