
ತಮ್ಮದೇ ರೀತಿಯಲ್ಲಿ ನಳಪಾಕ ತಯಾರು ಮಾಡುವವರಿಗೆ ನಮ್ಮಲ್ಲೇನು ಬರಗಾಲವಿಲ್ಲ. ತಮ್ಮ ಫುಡ್ನ್ನ ಫೇಮಸ್ ಮಾಡಬೇಕು ಅಂತಾ ಯಾವ ಹಂತಕ್ಕೆ ಹೋಗೋಕೂ ಇವರೆಲ್ಲ ಸಿದ್ಧರಿರ್ತಾರೆ.
ಇದೇ ಕಾರಣಕ್ಕಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇರುತ್ತೆ. ಈ ಬಾರಿ ದಕ್ಷಿಣ ಭಾರತದ ದಂಪತಿಯೊಂದು ಬಿಳಿ ಅನ್ನ ಹಾಗೂ ಲಕ್ನೋದ ಟುಂಡೆ ಕಬಾಬ್ ಕಾಂಬಿನೇಷನ್ ಮೂಲಕ ಸುದ್ದಿಯಾಗಿದೆ .
ಈ ಬಗ್ಗೆ ಟ್ವೀಟ್ ಮಾಡಿದ ಸ್ಪಡ್ಡಿಕ್ಯಾಟ್, ಲಕ್ನೋದಲ್ಲಿರುವ ನನ್ನ ಗಂಡನ ಮನೆಯವರು ಕಬಾಬ್ ಪೇಸ್ಟ್ನ್ನ ನನ್ನ ದಕ್ಷಿಣ ಭಾರತದಲ್ಲಿರುವ ಪೋಷಕರಿಗಾಗಿ ಕಳುಹಿಸಿಕೊಟ್ಟಿದ್ದಾರೆ. ನಾವದನ್ನ ಅನ್ನದ ಜೊತೆ ಸೇವಿಸಿದ್ದೇವೆ. ನಮ್ಮ ಈ ಹೊಸ ಕಾಂಬಿನೇಷನ್ ನೋಡಿ ನನ್ನ ಪತಿ ಹೌಹಾರಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ 1.3 ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್ ಹಾಗೂ 78 ರಿಟ್ವೀಟ್ಗಳನ್ನ ಪಡೆದುಕೊಂಡಿದೆ.