ಸದಾ ಹೊಸತನಗಳನ್ನು ಪರಿಚಯಿಸುವ ಗೂಗಲ್ ಅಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಭಾರತೀಯರಿಗೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ.
ಅಂದು ರಾಷ್ಟ್ರಗೀತೆ ಹಾಡುವಾಗ ಅದು ವಾದ್ಯ ಸಂಗೀತದ ಹಿಮ್ಮೇಳವನ್ಮು ಬಳಸಿಕೊಳ್ಳುವಂತೆ ಮಾಡುತ್ತಿದೆ.
ಗೂಗಲ್ ನ ಹೊಸ ಉಪಕ್ರಮ ಸೌಂಡ್ಸ್ ಆಫ್ ಇಂಡಿಯಾ ಅಡಿಯಲ್ಲಿ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಳಸಿ ಬಳಕೆದಾರರಿಗೆ ‘ಅಸೆಂಬ್ಲಿ’ ಫೀಲ್ ನೀಡುತ್ತದೆ.
ಹಾಗೆಯೇ ಪ್ರಸಾರ ಭಾರತಿ ಮತ್ತು ವರ್ಚುಯಲ್ ಭಾರತ್ ಸಹಯೋಗದಲ್ಲಿ ಸಾವಿರಾರು ಜನರ ಧ್ವನಿಯೊಂದಿಗೆ ಒಂದು ಮಾಸ್ಟರ್ ಟ್ರ್ಯಾಕ್ ರಚಿಸಲಾಗುತ್ತದೆ.
ಗೂಗಲ್ ಬಳಕೆದಾರ ಕೇವಲ ರಾಷ್ಟ್ರಗೀತೆ ಹಾಡಿದರೆ ಸಾಕು, ದನಿಗೆ ತಕ್ಕಂತೆ ಶಹನಾಯಿ ಸಾರಂಗಿ ಅಥವಾ ಬಾನ್ಸುರಿ ಅನ್ನು ಆಯ್ಕೆ ಮಾಡಿಕೊಂಡರೆ ಅದೇ ಲಯದಲ್ಲಿ ಹಾಡಬಹುದು. ಕರೋಕೆ ಟ್ರ್ಯಾಕ್ ನಂತೆ. ಅಷ್ಟೇ ಅಲ್ಲದೆ ಅದನ್ನು ಡೌನ್ಲೋಡ್ ಮಾಡಿ ಇತರರಿಗೆ ಶೇರ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.