ಹೈದರಾಬಾದ್ನ ಒಂದು ವರ್ಷ ಒಂಬತ್ತು ತಿಂಗಳ ಮಗುವೊಂದು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ವಿಶ್ವ ದಾಖಲೆ ಪುಸ್ತಕ ಸೇರಿದ್ದಾನೆ.
ಆದಿತ್ ವಿಶ್ವನಾಥ್ ಗೌರಿಶೆಟ್ಟಿ ಹೆಸರಿನ ಪುಟ್ಟ, ವಿಶ್ವ ದಾಖಲೆಗಳ ಪುಸ್ತಕ, ತೆಲುಗು ದಾಖಲೆಗಳ ಪುಸ್ತಕ, ಭಾರತ ದಾಖಲೆಗಳ ಪುಸ್ತಕ ಹಾಗೂ ರಾಷ್ಟ್ರ ಮಟ್ಟದ ಇನ್ನೆರಡು ದಾಖಲೆಗಳನ್ನು ತನ್ನ ಜ್ಞಾಪಕ ಶಕ್ತಿಯ ಕಾರಣದಿಂದ ಸೇರಿದ್ದಾನೆ.
ಇಷ್ಟೊಂದು ಪುಟ್ಟ ವಯಸ್ಸಿನಲ್ಲೇ ಆದಿತ್ ಕಾರುಗಳ ಲೋಗೋ, ಬಣ್ಣಗಳು, ಇಂಗ್ಲಿಷ್ ಅಕ್ಷರಗಳು, ಸಾಕು ಪ್ರಾಣಿಗಳು, ವನ್ಯ ಪ್ರಾಣಿಗಳು, ವೃತ್ತಿಗಳು, ದೇಹದ ಅಂಗಗಳು, ಧ್ವಜಗಳು, ಹಣ್ಣುಗಳು, ಮನೆಯ ವಿವಿಧ ವಸ್ತುಗಳು ಸೇರಿದಂತೆ ಅನೇಕ ವಸ್ತುಗಳನ್ನು ಗುರುತು ಹಿಡಿಯಬಲ್ಲ ಈ ಪುಟಾಣಿ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಾರಿಯ ಸ್ವತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಟಿವಿಯಲ್ಲಿ ರಿಲೇ ಮಾಡುತ್ತಲೇ ಆದಿತ್ ಎದ್ದು ನಿಂತು ಸಲ್ಯೂಟ್ ಮಾಡಿದ್ದನ್ನು ಕಂಡ ಆತನ ಹೆತ್ತವರು, ಆತನ ಈ ಅದ್ಭುತ ಬುದ್ಧಿಮತ್ತೆಯನ್ನು ಇನ್ನಷ್ಟು ಪರೀಕ್ಷಿಸಿದ ವೇಳೆ ಆತನ ಅಗಾಧ ಪ್ರತಿಭೆ ಆಳದ ಅರಿವಾಗಿದೆ.