ಭಾರತೀಯರು ತಮ್ಮದೇ ಆದ ಹೊಸ ಲೋಕಲ್ ತಂತ್ರಗಳಿಗೆ ಹೆಸರುವಾಸಿಯಾಗಿದ್ದಾರೆ ಎಂಬ ಮಾತಿದೆ.
ಇದೀಗ ಗುರುದ್ವಾರ ಲಂಗಾರ್ಖಾನದಲ್ಲಿ ಸ್ವಯಂ ಸೇವಕರು ಲಸ್ಸಿಯನ್ನು ವಿಶೇಷ ರೀತಿಯಲ್ಲಿ ವಿತರಿಸುವ ವಿಡಿಯೋ ವೈರಲ್ ಆಗಿದೆ.
ನಾಲ್ಕು ಚಕ್ರಗಳನ್ನು ಹೊಂದಿದ ಗಾಡಿಗೆ ಜೋಡಿಸಲಾದ ಸ್ಟೀಲ್ ಡ್ರಮ್‌ನೊಂದಿಗೆ ಚಿಕ್ಕ ಹುಡುಗ ಚಲಿಸುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು.
ಡ್ರಮ್‌ನ ಕೆಳಗಿನ-ಬಲಭಾಗದಲ್ಲಿ ಟ್ಯಾಪ್ ಇದ್ದು, ಭೋಜನಕ್ಕೆ ಕುಳಿತವರು ಲೋಟಕ್ಕೆ ಬಡಿಸುವವರ ಸಂಪರ್ಕ ಇಲ್ಲದೇ ಲಸ್ಸಿ ಬೀಳುವಂತೆ ಮಾಡಲಾಗಿದೆ. ಅದು ಸೈಕಲ್ ಬ್ರೇಕ್ ಗಳೊಂದಿಗೆ ಕಾರ್ಯ ನಿರ್ವಹಿಸುತ್ತದೆ ಮತ್ತು ಬ್ರೇಕ್‌ಗಳನ್ನು ಎಳೆಯುವಾಗ ಲಸ್ಸಿ ಟ್ಯಾಪ್‌ನಿಂದ ಸುರಿಯುತ್ತದೆ.
ಅಮೆಜಾನ್ ಇಂಡಿಯಾದ ಅಧಿಕಾರಿ ಅಮಿತ್ ಅಗರ್ವಾಲ್ ಟ್ವಿಟ್ಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡು “ಎಂಜಿನಿಯರಿಂಗ್ ಆವಿಷ್ಕಾರಗಳು! ಎಂಜಿನಿಯರ್‌ಗಳ ದಿನಾಚರಣೆಯ ಶುಭಾಶಯಗಳು!” ಎಂದು ಹಾರೈಸಿದ್ದಾರೆ.