ದೇಸೀ ಆಹಾರಗಳನ್ನು ಫ್ಯೂಶನ್ ಕಲ್ಚರ್‌ಗೆ ತೆರವುಗೊಳಿಸುವ ಕೆಲಸದಿಂದಾಗಿ ಇತ್ತೀಚಿನ ದಿನಗಳಲ್ಲಿ ಥರಾವರಿ ಹೈಬ್ರಿಡ್ ದೇಸೀ ಫುಡ್‌ಗಳನ್ನು ನೋಡುತ್ತಿದ್ದೇವೆ.
ಇದೀಗ ಗುಜರಾತಿ ವರ್ತಕರೊಬ್ಬರು ಐಸ್ ಕ್ರೀಂ ಹಾಗೂ ಟುಟ್ಟಿ-ಫ್ರೂಟಿ ಸ್ಟಫ್ ಮಾಡಿದ ವಡಾಪಾವ್ ಪರಿಚಯಿಸಿದ್ದಾರೆ. ಬನ್ ಮಧ್ಯದಲ್ಲಿ ಕೆಂಪು ಹಾಗೂ ಹಸಿರು ಸಿರಪ್ ಅನ್ನು ಲೇಪಿಸಿ, ಐಸ್ ಕ್ರೀಂ ಸ್ಕೂಪ್ ಅನ್ನು ಸೇರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಮಹಾರಾಷ್ಟ್ರ ಮೂಲದ ತಿಂಡಿಯಾದ ವಡಾಪಾವ್ ಅನ್ನು, ಅದಕ್ಕೆಂದೇ ವಿಶೇಷವಾಗಿ ತಯಾರಿಸಲಾದ ಬನ್ (ಪಾವ್) ಅನ್ನು ಸೀಳಿ ಮಧ್ಯದಲ್ಲಿ ಆಲೂಗೆಡ್ಡೆ ಬೋಂಡ (ವಡಾ) ತೂರಿಸಿ, ಜೊತೆಗೆ ಒಂದೆರಡು ಚಮಚ ಚಟ್ನಿಪುಡಿ ಸೇರಿಸಿ ಕೊಡಲಾಗುತ್ತದೆ.