ದೆಹಲಿಯ ಸ್ಟಾರ್ ರೆಸ್ಟೋರೆಂಟ್ ಹಾವಳಿಗಳ ನಡುವೆ ಶ್ಯಾಮ್ ರಸೋಯಿ ಎಂಬ ಹೋಟೆಲ್ ಊಹೆಗೂ ನಿಲುಕದ ದರದಲ್ಲಿ ಆಹಾರ ಪೂರೈಕೆ ಮಾಡುವ ಮೂಲಕ ರಾಜಧಾನಿ ಜನತೆಯ ಮನಸ್ಸನ್ನ ಗೆಲ್ಲುತ್ತಿದೆ. ಕೇವಲ 1 ರೂಪಾಯಿಗೆ ಜನರಿಗೆ ಹೊಟ್ಟೆ ತುಂಬಾ ಆಹಾರ ನೀಡ್ತಿರುವ ಶ್ಯಾಮ್ ರಸೋಯಿ ದೆಹಲಿಯ ಜನಪ್ರಿಯ ತಾಣಗಳಲ್ಲಿ ಒಂದಾಗಿಬಿಟ್ಟಿದೆ.
ಕಳೆದ 2 ತಿಂಗಳಿನಿಂದ ಈ ಅಂಗಡಿಯನ್ನ ಪರ್ವೀನ್ ಕುಮಾರ್ ಗೋಯೆಲ್ ಎಂಬವರು ನಡೆಸಿಕೊಂಡು ಹೋಗ್ತಿದ್ದಾರೆ. ಪ್ರತಿದಿನ ಇಲ್ಲಿ 1000ಕ್ಕಿಂತ ಹೆಚ್ಚು ಜನರಿಗೆ ಊಟ ಬಡಿಸಲಾಗುತ್ತೆ. ಹಾಗೂ ಇಂದ್ರಲೋಕ, ಸಾಯಿ ಮಂದಿರ ಸೇರಿದಂತೆ ಹತ್ತಿರದ ಏರಿಯಾಗಳಿಗೆ 1000 ಊಟದ ಪಾರ್ಸೆಲ್ ಕಳಿಸುತ್ತಿದ್ದಾರೆ.
ಈ ಅಂಗಡಿಯ ವಿಶೇಷತೆ ಏನೆಂದರೆ ಇಲ್ಲಿಯ ಅಡುಗೆಗೆ ಫಿಕ್ಸ್ ಹಣ ಅಂತಾ ಇಲ್ಲ. ಇಷ್ಟವಿದ್ದರು ದೇಣಿಗೆ ನೀಡಬಹುದು. ಇಲ್ಲವೇ ಆಹಾರಧಾನ್ಯವನ್ನೂ ನೀಡಬಹುದಂತೆ. ಈ ಮೊದಲು ಈ ಹೋಟೆಲ್ನಲ್ಲಿ 10 ರೂಪಾಯಿಗೆ ಊಟವನ್ನ ನೀಡಲಾಗ್ತಿತ್ತು. ಆದರೆ ಇದೀಗ ಕೇವಲ 1 ರೂಪಾಯಿಗೆ ಊಟ ಸಿಗುತ್ತಿದೆ.