ಪ್ರಕೃತಿ ತನ್ನೊಳಗಿನ ವಿಸ್ಮಯಗಳ ಮೂಲಕ ನಮ್ಮನ್ನು ಆಗಾಗ ಬೆರಗುಗೊಳಿಸುತ್ತಲೇ ಇರುತ್ತದೆ. ಈ ಚಿಟ್ಟೆಯೂ ಅಂತಹುದೇ ಒಂದು ವಿಸ್ಮಯ.
ರೆಕ್ಕೆ ಮುಚ್ಚಿದರೆ ತರಗೆಲೆಯಂತೆ ಕಾಣುತ್ತದೆ. ಬಿಚ್ಚಿದರೆ ಬಣ್ಣದ ಚಿಟ್ಟೆಯಂತೆ ಕಂಗೊಳಿಸುತ್ತದೆ. ರೆಕ್ಕೆ ಬಡಿಯದೆಯೇ ಒಂದೇ ಕಡೆ ಕುಳಿತಿದ್ದರೆ, ಅದು ಪತಂಗವೆಂಬುದು ಗೊತ್ತಾಗುವುದೇ ಇಲ್ಲ. ಸೂಕ್ಷ್ಮವಾಗಿ ಗಮನಿಸಿದರೆ, ಅದರ ಚಲನವಲನದ ಮೇಲೆ ನಿಗಾ ಇಟ್ಟರಷ್ಟೇ ಅದು ಚಿಟ್ಟೆ ಎಂಬುದು ವೇದ್ಯವಾಗುತ್ತದೆ. ಅಷ್ಟರ ಮಟ್ಟಿಗೆ ನಮ್ಮ ಸುತ್ತಲ ಪರಿಸರ ಚಕಿತಗೊಳಿಸುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಚಿಟ್ಟೆಯ ವಿಡಿಯೋ ಹರಿದಾಡುತ್ತಿದ್ದು, ಅನೇಕರು ವಿವಿಧ ಕಮೆಂಟ್ ಗಳನ್ನು ಮಾಡಿದ್ದಾರೆ. ಕಂಬಳಿಹುಳವೆಂಬ ಕೀಟ ಚಿಟ್ಟೆಯಾಗುತ್ತದೆ ಎಂಬ ವಿಕಾಸವಾದ ಗೊತ್ತಿರುವಂಥದ್ದೆ. ಆದರೆ, ತರಗೆಲೆ ಹೇಗಪ್ಪಾ ಚಿಟ್ಟೆಯಾಗುತ್ತದೆ ಎನಿಸಿಬಿಡುತ್ತದೆ. ಒಟ್ಟಾರೆ ನಿಸರ್ಗದಲ್ಲಿನ ನಿಗೂಢತೆಗೆ ಪಾರವೇ ಇಲ್ಲ.