ಕೊರೊನಾ ವೈರಸ್ನಿಂದ ಅತಿ ಹೆಚ್ಚು ಅಪಾಯದಲ್ಲಿರುವ 50 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನೇಷನ್ ಡ್ರೈವರ್ 3ನೇ ಹಂತದ ಭಾಗವಾಗಿ ಮಾರ್ಚ್ 2ನೇ ವಾರದಿಂದ ಲಸಿಕೆ ನೀಡಲಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ದನ್ ಹೇಳಿದ್ದಾರೆ.
ಈಗಾಗಲೇ ಕೊರೊನಾ ವ್ಯಾಕ್ಸಿನೇಷನ್ ಡ್ರೈವ್ 2ನೇ ಹಂತದ ಪ್ರಯುಕ್ತ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಮೂರನೇ ವ್ಯಾಕ್ಸಿನೇಷನ್ ಡ್ರೈವ್ ಆರಂಭಕ್ಕೆ ನಿಗದಿತ ದಿನಾಂಕವನ್ನ ಈಗಲೇ ಹೇಳೋದು ಕೊಂಚ ಕಷ್ಟ. ಆದರೆ ಮಾರ್ಚ್ ಎರಡು, ಮೂರು ಇಲ್ಲವೇ ನಾಲ್ಕನೇ ವಾರದೊಳಗಾಗಿ ಮೂರನೇ ಹಂತದ ಕೊರೊನಾ ಲಸಿಕೆ ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ರು.
ಲೋಕಸಭೆಯಲ್ಲಿ ಪ್ರಶ್ನಾವಳಿ ಅವಧಿಯ ವೇಳೆ ಈ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಹರ್ಷವರ್ಧನ್, ಮೂರನೇ ಹಂತವು ದೇಶದಲ್ಲಿ ಕೊರೊನಾ ಅಪಾಯದಲ್ಲಿರುವ 50 ವರ್ಷ ಮೇಲ್ಪಟ್ಟವರಿಗೆ ಮೀಸಲಿರಲಿದೆ ಎಂದು ಹೇಳಿದ್ರು.