ದೇಶದಲ್ಲಿ ಕೊರೊನಾ ಲಸಿಕೆ ಮೂರನೇ ಡೋಸ್ ತಯಾರಿ ನಡೆಯುತ್ತಿದೆ. ಇದನ್ನು ಬೂಸ್ಟರ್ ಡೋಸ್ ಎಂದು ಕರೆಯಲಾಗುತ್ತಿದೆ. ತಜ್ಞರ ಸಮಿತಿಯು, ಭಾರತ್ ಬಯೋಟೆಕ್ ಲಸಿಕೆ ಕೊವಾಕ್ಸಿನ್‌ನ ಮೂರನೇ ಡೋಸ್ ಗೆ ಒಪ್ಪಿಗೆ ನೀಡಿದೆ. ಎರಡನೇ ಡೋಸ್ ನೀಡಿದ ಆರು ತಿಂಗಳ ನಂತರ ಮೂರನೇ ಬೂಸ್ಟರ್ ಡೋಸ್ ನೀಡಲಾಗುವುದು. ಕೊರೊನಾ ವೈರಸ್ ಹೊಸ ರೂಪಾಂತರದಿಂದ ರಕ್ಷಣೆ ನೀಡುವ ಜೊತೆಗೆ ದೇಹದಲ್ಲಿ ಕೊರೊನಾ ವೈರಸ್ ಗೆ ಹೊಸ ತಳಿಗಳನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ.
ಭಾರತ್ ಬಯೋಟೆಕ್, ಕೊವಾಕ್ಸಿನ್ ನ ಮೂರನೇ ಡೋಸನ್ನು ಈಗಾಗಲೇ ಎರಡು ಡೋಸ್ ಪರೀಕ್ಷೆಗೆ ಒಳಗಾಗಿರುವ ಸ್ವಯಂ ಸೇವಕರಿಗೆ ನೀಡಲಿದೆ. ಮೂರನೇ ಡೋಸ್ ನಂತ್ರ ದೇಶದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಸುಮಾರು ವರ್ಷಗಳ ಕಾಲ ಕೊರೊನಾ ವಿರುದ್ಧ ಹೋರಾಡಲು ದೇಹ ಸದೃಡವಾಗಲಿದೆ ಎಂದು ಬಯೋಟೆಕ್ ಹೇಳಿದೆ.
ಹಿಂದಿನ ವರ್ಷ ಸೆಪ್ಟೆಂಬರ್, ಅಕ್ಟೋಬರ್ ಸಂದರ್ಭದಲ್ಲಿ ಕೊರೊನಾದ ಎರಡನೇ ಡೋಸ್ ತೆಗೆದುಕೊಂಡವರಿಗೆ ಈ ಲಸಿಕೆ ನೀಡಲಾಗುವುದು. ಮೂರನೇ ಡೋಸ್ ನೀಡಿದ ನಂತ್ರ ಕೆಲ ದಿನಗಳ ಕಾಲ ಪರೀಕ್ಷೆ ನಡೆಸಲಿದೆ. ಎಲ್ಲ ಪರೀಕ್ಷೆ ನಂತ್ರ ವರದಿಯನ್ನು ತಜ್ಞರ ಸಮಿತಿಗೆ ನೀಡಲಿದೆ. 190 ಸ್ವಯಂ ಸೇವಕರು ಎರಡನೇ ಡೋಸ್ ಪಡೆದಿದ್ದರು.