ಖಾಸಗಿ ಬ್ಯಾಂಕ್ನ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು ಎಟಿಎಂನ್ನ ಒಡೆದು ಅದರೊಳಗಿದ್ದ ಹಣವನ್ನ ಎತ್ತಿಕೊಂಡು ಪರಾರಿಯಾಗಿದ್ದಾರೆ. ವಿಚಿತ್ರ ಅಂದರೆ ಕಳ್ಳರು ಅಟ್ಯಾಕ್ ಮಾಡಿದ ಎಟಿಎಂ ಮಷಿನ್ನಲ್ಲಿ ಇದ್ದದ್ದು ಕೇವಲ 6000 ರೂಪಾಯಿ ಮಾತ್ರ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಸಟ್ನೆ ಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಈ ಸಂಬಂಧ ಖಾಸಗಿ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.
ಎಟಿಎಂ ಕೇಂದ್ರದೊಳಗೆ ನುಗ್ಗಿದ ಕಳ್ಳರು ಎಟಿಎಂ ಮಷಿನ್ ನಾಶ ಮಾಡಿದ್ದು ಮಾತ್ರವಲ್ಲದೇ ಸಿಸಿ ಕ್ಯಾಮರಾ ಹಾಗೂ ಗಾಜಿನ ಬಾಗಿಲನ್ನ ಮುರಿದು ಹಾಕಿದ್ದಾರೆ.