
ಎರಡು ಕಾರುಗಳಲ್ಲಿದ್ದ ಪ್ರವಾಸಿಗರು ಹುಲಿ ಫೋಟೋವನ್ನ ಕ್ಲಿಕ್ಕಿಸೋಕೆ ಕಾಯ್ತಾ ಇದ್ರು. ಕೂಡಲೇ ಪ್ರವಾಸಿಗರ ಬಳಿ ಜಿಗಿದು ಬಂದ ಹುಲಿರಾಯ ಪ್ರವಾಸಿಗರ ಜೀವ ಬಾಯಿಗೆ ಬರಸಿದ್ದಾನೆ.
ಅರಣ್ಯ ಇಲಾಖೆ ಅಧಿಕಾರಿ ಸುಸಾಂತಾ ನಂದಾ ಈ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದು ಪ್ರವಾಸಿಗರ ನಡವಳಿಕೆಯನ್ನ ಖಂಡಿಸಿದ್ದಾರೆ. ಅಲ್ಲದೇ ಈ ವಿಡಿಯೋವನ್ನ ನೋಡಿದ ನೆಟ್ಟಿಗರೂ ಕೂಡ ಹುಲಿಯ ತಾಳ್ಮೆಯನ್ನ ಮೆಚ್ಚಿದ್ದು ಮಾತ್ರವಲ್ಲದೇ ಪ್ರವಾಸಿಗರ ಪುಂಡಾಟವನ್ನ ಖಂಡಿಸಿದ್ದಾರೆ.