ಹೋಟೆಲ್ಗೆ ಹೋಗಿ ಚೆನ್ನಾಗಿ ತಿಂದ್ವಿ ಅಂದಮೇಲೆ ಅವರು ಬಿಲ್ ನೀಡೋದು ಸಾಮಾನ್ಯ. ಆದರೆ ಇಲ್ಲೊಂದು ಹೋಟೆಲ್ ತನ್ನ ಬಿಲ್ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಅಂದಹಾಗೆ ಇದಕ್ಕೆ ಕಾರಣ ಸಮೋಸಾ..!
ಸಮೋಸಾಗೂ ಹೋಟೆಲ್ ಬಿಲ್ಗೂ ಏನ್ ಸಂಬಂಧ ಅಂತಾ ನೀವು ಯೋಚನೆ ಮಾಡ್ತಾ ಇರಬಹುದು. ಸಮೋಸಾ ಹಾಗೂ ಕಚೋರಿಯ ಒಳಗಡೆ ಆಲೂ ಪಲ್ಯವನ್ನ ತುಂಬ್ತಾರೆ.
ಹೋಟೆಲ್ಗೆ ಬಂದು ಸಮೋಸಾ ಹಾಗೂ ಕಚೋರಿ ಬೇಡ ಎಂದು ಹೇಳಿ ಅವಕ್ಕೆ ನೋವು ಮಾಡಬೇಡಿ. ಯಾಕೆಂದ್ರೆ ಈ ತಿನಿಸಿಗೂ ಫಿಲ್ಲಿಂಗ್ಸ್ ಇದೆ ಅಂತಾ ತಮಾಷೆಯಾಗಿ ಬರೆಯಲಾಗಿದೆ.
ಚೆನ್ನೈನ ಶ್ರೀ ಚಾಟ್ಸ್ ಮಿಠಾಯಿ & ನಮಕೀನ್ ಅಂಗಡಿಗೆ ಸೇರಿದ ಈ ರಶೀದಿಯ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.