ಕೊರೊನಾ ಎರಡನೇ ಅಲೆ ಭಾರತದಲ್ಲಿ ಸಾಕಷ್ಟು ಸಾವು-ನೋವು ಉಂಟು ಮಾಡಿದೆ. ಕಳೆದ 10 ದಿನಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕೊರೊನಾ ಲಕ್ಷಣಗಳು ದಿನ ದಿನಕ್ಕೂ ಬದಲಾಗ್ತಿದ್ದು, ಹೊಸ ಲಕ್ಷಣಗಳು ಆತಂಕ ಹುಟ್ಟಿಸಿದೆ. ಈಗಾಗಲೇ ನಿಮಗೆ ಕೊರೊನಾ ಬಂದು ಹೋಗಿದ್ಯಾ…? ಅಥವಾ ಕೊರೊನಾದ ಸೌಮ್ಯ ಲಕ್ಷಣಗಳಿಂದ ನೀವು ಬಳಲುತಿದ್ದೀರಾ ಎಂಬುದನ್ನು ನೀವು ತಿಳಿಯಬಹುದು.
ವೈರಸ್ ಇನ್ಫೆಕ್ಷನ್ ನಿಂದಾಗಿ ಕಣ್ಣು ಕೆಂಪಾಗುತ್ತದೆ. ಆದ್ರೆ ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಬರುವುದು ಕೋವಿಡ್ ಲಕ್ಷಣವಾಗಿರುವ ಸಾಧ್ಯತೆಯೂ ಇದೆ. ಆದ್ರೆ ಕೊರೊನಾ ಇದ್ದವರಿಗೆ ಕಣ್ಣು ಕೆಂಪಾಗುವುದು ಮಾತ್ರವಲ್ಲ ಜ್ವರ, ತಲೆನೋವು ಕಾಣಿಸಿಕೊಳ್ಳುತ್ತದೆ. ಈಗಾಗಲೇ ನೀವು ಇದನ್ನು ಅನುಭವಿಸಿದ್ದರೆ ನಿಮಗೆ ಕೊರೊನಾ ಬಂದು ಹೋಗಿದೆ ಎಂದರ್ಥ.
ಕೊರೊನಾದ ಇನ್ನೊಂದು ಲಕ್ಷಣ ದಣಿವು. ಅತಿಯಾದ ದಣಿವು ಕೊರೊನಾದ ಲಕ್ಷಣವಾಗಿದೆ. ದಿನ ನಿತ್ಯದ ಕೆಲಸ ಮಾಡಲು ಸಾಧ್ಯವಾಗಿಲ್ಲವೆಂದಾದ್ರೆ, ಇದು ನಾಲ್ಕೈದು ದಿನ ನಿಮ್ಮನ್ನು ಕಾಡಿದೆ ಎಂದಾದ್ರೆ ನೀವು ಕೊರೊನಾ ಸೋಂಕಿಗೆ ಒಳಗಾಗಿದ್ದೀರಿ ಎಂದರ್ಥ.
ಕೊರೊನಾ ಜನರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಗೊಂದಲ, ಏಕಾಗ್ರತೆ ಸಮಸ್ಯೆಯನ್ನು ಕೆಲವರು ಎದುರಿಸುತ್ತಾರೆ. ಯಾವುದೇ ವಿಷ್ಯವನ್ನು ಕೇಂದ್ರೀಕರಿಸಲು ಸಾಧ್ಯವಾಗದೆ, ವಿಷಯಗಳನ್ನು ನೆನಪಿಟ್ಟುಕೊಳ್ಳಲು ಕಷ್ಟವಾಗ್ತಿದ್ದರೆ ಇದು ಕೂಡ ಕೊರೊನಾ ಲಕ್ಷಣಗಳಲ್ಲಿ ಒಂದಾಗಿದೆ.
ಕೊರೊನಾ ಉಸಿರಾಟದ ವ್ಯವಸ್ಥೆ ಮಾತ್ರವಲ್ಲದೆ ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತಿದೆ. ಸಂಶೋಧನೆಯ ಪ್ರಕಾರ, ಕೊರೊನಾ ಸೋಂಕಿಗೆ ಒಳಗಾದ ನಂತರ ಶೀತ ಅಥವಾ ಜ್ವರ ಬರದ ಅನೇಕ ಜನರಿದ್ದಾರೆ. ಅವರಿಗೆ ಅತಿಸಾರ, ವಾಕರಿಕೆ, ಹೊಟ್ಟೆ ನೋವು ಮತ್ತು ಹಸಿವಿನ ಕೊರತೆಯ ಲಕ್ಷಣ ಕಾಣಿಸಿಕೊಂಡಿದೆ.
ಉಸಿರಾಟದ ತೊಂದರೆ ಕೊರೊನಾದ ಲಕ್ಷಣಗಳಲ್ಲಿ ಒಂದು. ಎದೆ ಬಿಗಿತ ಮತ್ತು ಉಸಿರಾಟದ ತೊಂದರೆ, ಎದೆ ಬಡಿತದಲ್ಲಿ ಹೆಚ್ಚಳ ಇವು ಕೊರೊನಾ ಲಕ್ಷಣಗಳಲ್ಲಿ ಒಂದಾಗಿವೆ.