ಸಾಮಾಜಿಕ ಜೀವನದಲ್ಲಿ ಇಂಗ್ಲಿಷ್ ಗೊತ್ತಿದೆ ಎಂದರೆ ನಿಮ್ಮನ್ನು ನೋಡುವ ರೀತಿಯೇ ಬೇರೆ. ಆದರೆ ಕೆಲವೊಮ್ಮೆ ಇಂಗ್ಲಿಷ್ ಬಳಸಲು ಹೋಗಿ ಮಾಡಿಕೊಳ್ಳುವ ಎಡವಟ್ಟು ಅಷ್ಟಿಷ್ಟಲ್ಲ. ಅದಕ್ಕೆ ಅಮಿತಾಬ್ ಸಿನಿಮಾವೊಂದರಲ್ಲಿ, ಇಂಗ್ಲಿಷ್‌ನಲ್ಲಿ ಮಾತನಾಡಬಹುದು, ನಡೆಯಬಹುದು ಹಾಗೂ ನಗಬಹುದು ಎಂದು ಹೇಳಿದ್ದು.
ಹೌದು, ಇದೀಗ ಇಂಗ್ಲಿಷ್ ಜಾಹಿರಾತು ನೀಡಲು ಹೋಗಿ ಮಾಡಿಕೊಳ್ಳುವ ಎಡವಟ್ಟುಗಳ ಬಗ್ಗೆ ಟ್ವೀಟರ್‌ನಲ್ಲಿ ಭಾರಿ ಸುದ್ದಿಯಾಗಿದ್ದು, ಅನೇಕರು ಫೋಟೋ ಸಮೇತ ಇಂಗ್ಲಿಷ್ ಹೆಸರಲ್ಲಿ ಆಗಿರುವ ಪ್ರಮಾದಗಳನ್ನು ಹೇಳಲು ಹೊರಟಿದ್ದಾರೆ.
ಆರಂಭದಲ್ಲಿ ಐಪಿಎಸ್ ಅಧಿಕಾರಿ ಪಂಕಜ್ ನೈನೆ, ಫೋಟೋವೊಂದನ್ನು ಶೇರ್ ಮಾಡಿದ್ದು, ಇದರಲ್ಲಿ ಇಂಗ್ಲಿಷ್ ನ್ನು ಬೆಳಕಲ್ಲಿ ಕಲಿಯಿರಿ ಎನ್ನುವ ಅರ್ಥ ಬರುವ ಸಂದೇಶ ಫೋಟೋವನ್ನುಹಾಕಿದ್ದಾರೆ. ಈ ಫೋಟೋ ಹಾಕುತ್ತಿದ್ದಂತೆ, ನೂರಾರು ಮಂದಿ ಹಾಸ್ಯಾಸ್ಪದ ಇಂಗ್ಲಿಷ್ ಜಾಹಿರಾತು ಫಲಕವನ್ನು ಹಾಕಿದ್ದಾರೆ. ಅದರಲ್ಲಿ ಆಯ್ದ ಕೆಲವು ಫೋಟೋಗಳು ಇಲ್ಲಿವೆ ನೋಡಿ.
ಇನ್ನು ಪಂಕಜ್ ಅವರು ಈ ಫೋಟೋ ಹಾಕುತ್ತಿದ್ದಂತೆ ಭಾರಿ ವೈರಲ್ ಆಗಿದ್ದು, ಸುಮಾರು 13 ಸಾವಿರ ಮಂದಿ ಲೈಕ್ ಮಾಡಿದ್ದು, ಸಾವಿರಾರು ಮಂದಿ ರಿಟ್ವೀಟ್ ಮಾಡಿದ್ದಾರೆ. ನಿಮ್ಮ ಬಳಿಯೂ ಈ ರೀತಿಯ ಹ್ಯಾಸ್ಪಾಸ್ಪದ ಜಾಹಿರಾತು ಫಲಕಗಳಿದ್ದರೆ, ಅವನ್ನು ನೋಡಿ ನಕ್ಕು ಬಿಡಿ.