ತಿಂಡಿ-ತಿನಿಸುಗಳ ಬಗ್ಗೆ ಜಾಲತಾಣದಲ್ಲಿ ಸಾಕಷ್ಟು ಬಿಸಿಬಿಸಿ ಚರ್ಚೆಗಳು ಆಗಾಗ ನಡೆಯುತ್ತಿರುತ್ತವೆ. ಈಗ ಬೆಳ್ಳುಳ್ಳಿಯ ಸರದಿ.
ಬೆಳ್ಳುಳ್ಳಿ ಎಷ್ಟು ಬಳಸಬೇಕು ಎಂಬ ಬಗ್ಗೆ ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆ ನಡೆದಿದೆ. ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ. ಒಟ್ಟಿನಲ್ಲಿ ಮತ್ತೆ ಬೆಳ್ಳುಳ್ಳಿ ಚರ್ಚೆ ಮುನ್ನೆಲೆಗೆ ಬಂದು ನಿಂತಿದೆ.
ಟ್ವಿಟ್ಟರ್ ನಲ್ಲಿ ಮನಿ ಇ ಆರ್ಟ್ ಖಾತೆ ಹೇಳಿರುವ ಮಾತು ಇಷ್ಟೆಲ್ಲ ಚರ್ಚೆಗೆ ಕಾರಣವಾಗಿದೆ. ಎರಡು ತುಂಡು ಬೆಳ್ಳುಳ್ಳಿ ಬಳಸಿ ಎಂದು ಪಾಕಶಾಸ್ತ್ರ ಹೇಳುತ್ತಂತೆ. ಅರ್ಥವಾಯಿತು ಎನ್ನುತ್ತಾರಂತೆ ಬಳಕೆದಾರರು.
ಇದನ್ನು ಕಂಡ ನೆಟ್ಟಿಗರು, ಯಾವುದನ್ನೇ ಆಗಲಿ ಹೆಚ್ಚು ಬಳಸಿದರೆ, ಅಮೃತವೂ ವಿಷವಾಗುತ್ತದೆ ಎಂದರೆ, ಇನ್ನೂ ಕೆಲವರು ಕೆಜಿಗಟ್ಟಲೆ ಬೆಳ್ಳುಳ್ಳಿ ಬಳಸಿದರೂ ಏನು ಆಗುವುದಿಲ್ಲ ಎಂದಿದ್ದಾರೆ. ಚರ್ಚೆಯ ಓಘ ಮುಂದುವರಿದಿದೆ.
https://twitter.com/monyeeart/status/1295500645022052354?ref_src=twsrc%5Etfw%7Ctwcamp%5Etweetembed%7Ctwterm%5E1295500645022052354%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Ftheres-no-such-thing-as-too-much-garlic-womans-meme-on-garlic-goes-viral%2F640168
https://twitter.com/HI_Darius/status/1295861680467927040?ref_src=twsrc%5Etfw%7Ctwcamp%5Etweetembed%7Ctwterm%5E1295861680467927040%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Ftheres-no-such-thing-as-too-much-garlic-womans-meme-on-garlic-goes-viral%2F640168