alex Certify ಮಾತೃತ್ವದ ಸವಾಲನ್ನು ಹೇಳ್ತಿದೆ ʼಫೇಸ್​ಬುಕ್​ʼನಲ್ಲಿ ಶೇರ್​ ಆದ ಈ ಪೋಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾತೃತ್ವದ ಸವಾಲನ್ನು ಹೇಳ್ತಿದೆ ʼಫೇಸ್​ಬುಕ್​ʼನಲ್ಲಿ ಶೇರ್​ ಆದ ಈ ಪೋಸ್ಟ್

ಸೋಶಿಯಲ್​ ಮೀಡಿಯಾದಲ್ಲಿ ವಿಶ್ವದ ಅನೇಕ ಸುದ್ದಿಗಳು ಹರಿದಾಡ್ತಾನೇ ಇರುತ್ತೆ. ಕೆಲ ದಿನಗಳ ಹಿಂದಷ್ಟೇ ಮಹಿಳೆಯೊಬ್ಬರು ಫೇಸ್​ಬುಕ್​ನಲ್ಲಿ ಫೋಟೋವೊಂದನ್ನ ಶೇರ್​ ಮಾಡಿದ್ದು ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಫೋಟೋದಲ್ಲಿ ಮಹಿಳೆ ಶೌಚಾಲಯದಲ್ಲಿ ಅರ್ಧ ಬಾಗಿಲನ್ನ ತೆರೆದುಕೊಂಡು ಕಮೋಡ್​ ಮೇಲೆ ಕುಳಿತಿದ್ದಾರೆ. ಫೇಸ್​ಬುಕ್​​ನಲ್ಲಿ ಮಹಿಳೆ ಶೇರ್​ ಮಾಡಿರುವ ಈ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ತಾಯಿಯ ಜವಾಬ್ದಾರಿ ಹೇಗಿರುತ್ತೆ ಅನ್ನೋದ್ರ ಬಗ್ಗೆ ಹೆಚ್ಚಿನ ವಿವರಣೆ ನೀಡಬೇಕು ಎಂದಿಲ್ಲ. ತಾಯಿಯಾದಾಗ ಎದುರಾಗುವ ಸವಾಲುಗಳು ಜೀವನದ ಬಹುದೊಡ್ಡ ಕಷ್ಟಗಳಲ್ಲೊಂದು. ಇದೇ ವಿಚಾರವಾಗಿಯೇ ಗೀತಾ ಎಂಬ ಹೆಸರಿನ ಮಹಿಳೆ ಈ ಫೋಟೋ ಶೇರ್​ ಮಾಡಿದ್ದಾಳೆ.

ನಾನು ಶೌಚಾಲಯದ ಬಾಗಿಲನ್ನ ಸಂಪೂರ್ಣವಾಗಿ ಕೊನೆಯ ಬಾರಿಗೆ ಯಾವಾಗ ಬಂದ್​ ಮಾಡಿದ್ದೆ ಅನ್ನೋದೇ ನೆನಪಿಲ್ಲ. ನನ್ನ ಪರಿಸ್ಥಿತಿ ಹೇಗಿದೆ ಅಂದರೆ ನನಗೆ ಒಮ್ಮೊಮ್ಮೆ ಆಫೀಸಿನಲ್ಲಿ ಶೌಚಾಲಯದ ಬಾಗಿಲು ಬಂದ್​ ಮಾಡೋದು ಸಹ ಮರೆತುಹೋಗಿ ಬಿಡುತ್ತೆ. ಈಗ ಮಗು ಕೂಡ ಫೋಟೋ ಕ್ಲಿಕ್ಕಿಸೋದನ್ನ ಕಲಿತಿದೆ. ಏಕ ಪೋಷಕತ್ವದ ಜೀವನವಿದು ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಸಿಕ್ಕಾಪಟ್ಟೆ ಲೈಕ್​ ಹಾಗೂ ಕಮೆಂಟ್​ಗಳನ್ನ ಗಳಿಸಿದೆ.

https://www.facebook.com/photo.php?fbid=4147357418631042&set=a.173868405979983&type=3

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...