alex Certify ನೆಟ್ಟಿಗರ ಮನಗೆದ್ದ ಪುಟಾಣಿ ಯೋಧ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮನಗೆದ್ದ ಪುಟಾಣಿ ಯೋಧ…!

ಇಂಡೋ – ಟಿಬೆಟಿಯನ್​ ಗಡಿಯಲ್ಲಿ ಪುಟ್ಟ ಹುಡುಗ ಸೇನಾ ಸಮವಸ್ತ್ರ ಧರಿಸಿದ ಸೆಲ್ಯೂಟ್​ ಮಾಡುತ್ತಿರುವ ವಿಡಿಯೋ ಅಕ್ಟೋಬರ್​ ತಿಂಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ಅದೇ ಹುಡುಗನ ಮತ್ತೊಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

ನವಾಂಗ್​ ನಂಗ್ಯಾಲ್​ ಎಂಬ ಹೆಸರಿನ ಈ ಹುಡುಗ ಸೇನಾ ಸಮವಸ್ತ್ರ ಧರಿಸಿ ನೀಡಿದ ಕಮಾಂಡ್​ಗೆ ತಕ್ಕಂತೆ ಸೆಲ್ಯೂಟ್​ ಹಾಗೂ ಪರೇಡ್​ ಮಾಡಿದ್ದಾನೆ.

ಈ ವಿಡಿಯೋವನ್ನ ಐಟಿಬಿಪಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು ವರ್ಷದ ವಿದ್ಯಾರ್ಥಿ ನವಾಂಗ್​ ಲಡಾಕ್​ನ ಗ್ರಾಮವೊಂದರ ಬಳಿ ಇಂಡೋ – ಟಿಬೆಟಿಯನ್​ ಯೋಧರಿಗೆ ನಮಸ್ಕರಿಸುತ್ತಿದ್ದಾನೆ ಎಂದು ಬರೆದುಕೊಂಡಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ನಮ್ಮ ಭವಿಷ್ಯದ ಭಾರತೀಯ ಯೋಧ ಎಂದು ಬಾಲಕನಿಗೆ ಬಿರುದು ನೀಡಿದ್ದಾರೆ.

— ITBP (@ITBP_official) November 15, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...