ಚಹಾ ಕುಡಿಯುವ ಗೀಳು ನಿಮಗೂ ಅಂಟಿಕೊಂಡಿದೆಯೇ ? ಕುಡಿಯದಿದ್ದರೆ ಏನನ್ನೋ ಕಳೆದುಕೊಂಡ ಅನುಭವ ಅಗುತ್ತದೆಯೇ….? ಹಾಗಿದ್ದರೆ ಇಲ್ಲಿ ಕೇಳಿ. ಸಂಶೋಧನೆಯೊಂದು ಚಹಾ ಕುಡಿದರೆ ವಯಸ್ಸಾದವರಲ್ಲಿ ಕಾಣಬರುವ ಖಿನ್ನತೆ ಸಮಸ್ಯೆ ದೂರವಾಗುತ್ತದೆ ಎಂದಿದೆ.
ವಯಸ್ಸಾದವರಲ್ಲಿ ಕಂಡು ಬರುವ ಖಿನ್ನತೆ ಕುರಿತು ಅಧ್ಯಯನವೊಂದು ನಡೆದಿತ್ತು. ಈ ವರದಿಯ ಪ್ರಕಾರ ನಿಯಮಿತವಾಗಿ ಚಹಾ ಕುಡಿದರೆ ಖಿನ್ನತೆ ದೂರವಾಗುತ್ತದೆ. ಮತ್ತೊಂದು ಸಂಶೋಧನೆಯ ಪ್ರಕಾರ ಚಹಾದಲ್ಲಿ ಕಂಡುಬರುವ ಕೆಲವು ಅಂಶಗಳು ಮೆದುಳಿನ ಚಟುವಟಿಕೆಯನ್ನು ಸಕ್ರಿಯಗೊಳಿಸುತ್ತದೆ.
ಚಹಾದಲ್ಲಿ ಕ್ಯಾಟೆಚಿನ್, ಎಲ್ ಥಾನೈನ್ ಮತ್ತು ಕೆಫಿನ್ ಅಂಶಗಳಿವೆ. ಇದು ಮನಃಸ್ಥಿತಿ ಮತ್ತು ಹೃದಯ ರಕ್ತನಾಳದ ಅರೋಗ್ಯಕ್ಕೆ ಒಳ್ಳೆಯದು ಎಂದು ಅಧ್ಯಯನ ತಿಳಿಸಿದೆ.
ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯೂ ಇದಕ್ಕಿದೆ. ಗ್ರಾಮೀಣ ಮತ್ತು ನಗರಗಳಲ್ಲಿ ವಾಸಿಸುವ ಹಿರಿಯ ವ್ಯಕ್ತಿಗಳು ಪ್ರತಿನಿತ್ಯ ಚಹಾ ಕುಡಿಯುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ ಎಂದು ಹೇಳಲಾಗಿದೆ.