alex Certify ಭಾರತದಲ್ಲಿ ʼಕೊರೊನಾʼ ಸಾವಿನ ಸಂಖ್ಯೆ​ ಕಡಿಮೆಯಾಗಲು ಕಾರಣವೇನು….? ಇಲ್ಲಿದೆ ಕುತೂಹಲಕಾರಿ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ʼಕೊರೊನಾʼ ಸಾವಿನ ಸಂಖ್ಯೆ​ ಕಡಿಮೆಯಾಗಲು ಕಾರಣವೇನು….? ಇಲ್ಲಿದೆ ಕುತೂಹಲಕಾರಿ ಮಾಹಿತಿ

ವಿಶ್ವದಲ್ಲೇ 2ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರೋ ಭಾರತವನ್ನ ಕೊರೊನಾ ವೈರಸ್​ ನಲುಗಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅವಿರತ ಪರಿಶ್ರಮದ ಬಳಿಕವೂ ದೇಶದಲ್ಲಿ ಸೋಂಕಿತರ ಸಂಖ್ಯೆಗೇನು ಬ್ರೇಕ್​ ಬಿದ್ದಿಲ್ಲ.

ಪ್ರಸ್ತುತ 70 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರನ್ನ ಹೊಂದಿರೋ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರನ್ನ ಹೊಂದಿರೋ ರಾಷ್ಟ್ರಗಳಲ್ಲಿ ಎರಡನೇ ಸ್ಥಾನವನ್ನ ಪಡೆದಿದೆ. ಆದರೆ ಆಶ್ಚರ್ಯಕರ ವಿಚಾರ ಅಂದ್ರೆ ಸೋಂಕಿತರ ಸಂಖ್ಯೆ ಈ ಮಟ್ಟದಲ್ಲಿದ್ರೂ ನಮ್ಮಲ್ಲಿ ಕೋವಿಡ್​ನಿಂದ ಮರಣಕ್ಕೀಡಾದವರ ಸಂಖ್ಯೆ ತುಂಬಾನೇ ಕಡಿಮೆ. ಅಂದ್ರೆ 1 ಲಕ್ಷ ಸೋಂಕಿತರಲ್ಲಿ ಕೇವಲ 7.73 ಪ್ರತಿಶತದಷ್ಟು ಜನರು ಮಾತ್ರ ಸಾವಿಗೀಡಾಗ್ತಾ ಇದ್ದಾರೆ.

ಸಾವಿನ ಸಂಖ್ಯೆ ಇಷ್ಟೊಂದು ಹತೋಟಿಯಲ್ಲಿರಲು ಕಾರಣ ನಮ್ಮ ದೇಶದಲ್ಲಿರೋ ಯುವಜನತೆ ಸಂಖ್ಯೆ. ನಮ್ಮ ದೇಶದಲ್ಲಿ ವೃದ್ಧರಿಗಿಂತ ಯುವಜನತೆ ಸಂಖ್ಯೆ ಜಾಸ್ತಿ ಇದೆ. ಹೀಗಾಗಿ ಕರೊನಾ ಸೋಂಕಿಗೆ ಯುವಜನತೆ ಈಡಾದ್ರೂ ಸಹ ಅತ್ಯಂತ ವೇಗದಿಂದ ಕೋವಿಡ್​ ನ್ನ ಗೆದ್ದುಬಿಡ್ತಾರೆ.

ಯುರೋಪ್​ ಖಂಡದಲ್ಲಿ ಜನವರಿ ವೇಳೆಗಾಗಲೇ ಕೊರೊನಾ ನಿಯಂತ್ರಣ ಮೀರಿ ಹೋಗಿತ್ತು. ನಮ್ಮ ದೇಶದಲ್ಲಿ ಮೊದಲು ಸೋಂಕು ಕಾಣೋವಷ್ಟರ ಹೊತ್ತಿಗೆ ಇಟಲಿಯಲ್ಲಿ ಸೋಂಕಿತರ ಸಂಖ್ಯೆ 24,000 ಗಡಿ ದಾಟಿತ್ತು. ಇತ್ತ ಫ್ರಾನ್ಸ್​ನಲ್ಲಂತೂ 150 ಸೋಂಕಿತರು ಪ್ರಾಣವನ್ನೇ ಬಿಟ್ಟಿದ್ರು. ಕೊರೊನಾ ನಮ್ಮಲ್ಲಿ ಪ್ರಾಥಮಿಕ ಹಂತದಲ್ಲಿ ಇರೋವಾಗಲೇ ನಮ್ಮಲ್ಲಿ ಕಠಿಣ ಲಾಕ್ ​ಡೌನ್​ ಜಾರಿಯಾಯ್ತು. ಇದೂ ಸಹ ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಮುಖ್ಯ ಕಾರಣವಾಯ್ತು.

ಭಾರತದ ಆಹಾರ ಪದ್ಧತಿಯೇ ಒಂದು ಔಷಧಿ ಎನ್ನುತ್ತೆ ಅಧ್ಯಯನ. ಹೀಗಾಗಿ ಯುರೋಪ್​ ದೇಶಗಳಿಗೆ ಹೋಲಿಸಿದ್ರೆ ನಮ್ಮ ಜನತೆಯಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ. ಹೀಗಾಗಿ ಇದೂ ಕೊರೊನಾ ಎದುರಿಸೋಕೆ ತುಂಬಾನೇ ಸಹಾಯ ಮಾಡಿದೆ.

ಭಾರತದಲ್ಲಿ ಕೊರೊನಾದಿಂದ ಮೃತರಾದವ ಸಂಖ್ಯೆ ನಿರ್ದಿಷ್ಟವಾಗಿದೆ ಅಂತಾನೂ ಹೇಳೋಕೆ ಬರಲ್ಲ. ಗ್ರಾಮೀಣ ಭಾಗದಲ್ಲಿ ಎಷ್ಟು ಮಂದಿ ಕೊರೊನಾದಿಂದಲೇ ಮೃತರಾಗಿದ್ದಾರೆ ಅನ್ನೋದ್ರ ಬಗ್ಗೆ ನಿಖರ ಲೆಕ್ಕಾಚಾರವಿಲ್ಲ. ಆಸ್ಪತ್ರೆಯಲ್ಲಿ ಸತ್ತವರ ಸಂಖ್ಯೆಯನ್ನ ಮಾತ್ರ ಸರ್ಕಾರ ದಾಖಲಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...